ಬೆಳ್ತಂಗಡಿ; ಕೊಕ್ರಾಡಿ ಗ್ರಾಮದ ಕುಂಟಾಲ್ಕಟ್ಟೆ ಕ್ರಾಸ್ ನಲ್ಲಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಗಾಯಾಳು ವ್ಯಕ್ತಿಯನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ.
ಬೈಕ್ ಹಾಗೂ ಓಮ್ನಿ ಕಾರು ಎದುರು ಬದುರಾಗಿ ಡಿಕ್ಕಿ ಹೊಡೆದಿದೆ ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಕ್ರಾಡಿ ಕುಂಟಾಲ್ ಕಟ್ಟೆ ಕ್ರಾಸ್ ನಲ್ಲಿ ಆಗಾಗ ಅಪಘಾತ ಗಳು ಸಂಭವಿಸುತ್ತಿದೆ, ಅಪಘಾತಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆೆ