Home ಸ್ಥಳೀಯ ಸಮಾಚಾರ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

0

ಬೆಳ್ತಂಗಡಿ; ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು . ಮತ್ತು ಶ್ರೀದೇವಿ ಅಪ್ಪಿಕಲ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ ದ.ಕ.ಜಿ .ಹಿ ಪ್ರಾಥಮಿಕ ಮುಗುಳಿ ಶಾಲೆಯಲ್ಲಿ. ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿಯ ವಹಿಸಿಕೊಂಡಿದ್ದರು.
ರಾಜ ಕೇಸರಿ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಂತಹ.
ಮುಗಳಿ ನಾರಾಯಣರಾವ್ ರಾಜ ಕೇಸರಿ ತಾಲೂಕು ಅಲ್ಲದೆ ರಾಜ್ಯಾದ್ಯಂತ ತನ್ನ ನಿಸ್ವಾರ್ಥ ಸೇವೆ ಮೂಲಕ ಎಲ್ಲರಿಗೂ ಮಾದರಿ ಸಂಘಟನೆಯಾಗಿದೆ ಸಂಘಟನೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಬೆಳ್ತಂಗಡಿ ತಾಲೂಕಿಗೆ ಹೆಸರು ತಂದು ಕೊಡುವಂತಾಗಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿಮುಖ್ಯ ಅತಿಥಿಗಳಾಗಿಮಂಜುಳಾ ಮಾಲಕರು ಶ್ರೀದೇವಿ ಅಪ್ಪಿಕಲ್ಸ್ ಸಂತೆಕಟ್ಟೆ, ಕರುಣಾಕರ ಬಂಗೇರ ‌ ಅಧ್ಯಕ್ಷರು ಜೆಪಿ ಅಟ್ಟಾಕರ್ಸ್ ಬುಟ್ಟುಗುಡ್ಡೆ,ಲೂಸಿ ಲೀನಾ ಮೋರಸ್ ಮುಖ್ಯೋಪಾಧ್ಯಾಯರು ಮುಗುಳಿ ಶಾಲೆ,
ಪ್ರಸಾದ್ ಕುಲಾಲ್ ಜಿಲ್ಲಾ ಸಂಚಾಲಕರು ರಾಜ ಕೇಸರಿ, ಹರೀಶ್ ಕುಮಾರ್ ಶೆಟ್ಟಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜ ಕೇಸರಿ, ಗೌತಮ್ ಪೂಜಾರಿ ನೆಲ್ಲಿಗುಡ್ಡೆ. ಅಧ್ಯಕ್ಷರು ಬಂಟ್ವಾಳ ತಾಲೂಕು ರಾಜ ಕೇಸರಿ,ರಮೇಶ್ ನಾಯ್ಕ್ ಕಳಮೆ ಸಂಚಾಲಕರು ರಾಜ ಕೇಸರಿ ಬಂಟ್ವಾಳ ತಾಲೂಕು, ದೇವರಾಜ್. ಮಾಲಕರು ಕೆ ಸಿ ಬೆಳ್ತಂಗಡಿ ಹಾಗೂ ಇತರರು ಇದ್ದರು.
ಈ ಸಂದರ್ಭದಲ್ಲಿ ನೂರಕ್ಕಿಂತ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡು‌ ಉಚಿತ ನೇತ್ರ ತಪಾಸಣೆ ಶಿಬಿರದ ಪ್ರಾಯೋಜತಕವನ್ನು ಪಡೆದುಕೊಂಡರು ಸಂತೋಷ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಗುರುವನಕೆರೆ ಸ್ವಾಗತಿಸಿದರು, ಸಂದೀಪ್ ಬೆಳ್ತಂಗಡಿ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version