Home ಸ್ಥಳೀಯ ಸಮಾಚಾರ ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಗೆ ರಾಜ್ಯಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಗೆ ರಾಜ್ಯಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

0


ಉಜಿರೆ : ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಜರುಗಿದ ನಾಲ್ಕನೇ ಐ ಎಸ್ ಟಿ ಇ ರಾಜ್ಯಮಟ್ಟದ “ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಮಾವೇಶ-2024” ದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಉಜಿರೆಯ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಎರಡೂ ವಿಭಾಗಗಳಲ್ಲಿ ಪ್ರತ್ಯೇಕವಾಗಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಮಲ್ಟಿಪರ್ಪಸ್ ಅಗ್ರಿ ಟ್ರಾಲಿಯನ್ನು ವಿನ್ಯಾಸಗೊಳಿಸಲಾಗಿದೆ ಆಧುನಿಕ ಕೃಷಿ ಪದ್ಧತಿಗೆ ಅನುಕೂಲವಾಗುವಲ್ಲಿ ಇದುಸಹಕಾರಿಯಾಗಿದೆ. ಈ ಟ್ರಾಲಿಯನ್ನು ಬೈಕ್ ಮತ್ತು ಓಮಿನಿ ಬಿಡಿಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಾದ ಸುಮಂತ್ ಎಸ್ ಕೋಟೆ, ಮನ್ವಿತ್ , ಎ ಅಮೀನ್ ಅಹ್ಮದ್ , ಚೇತನ್ ಎಂ , ಗುರುರಾಜ್ ಕೆ ಮತ್ತು ವಿನಯ್ ಬಿ ಪಿ ಪ್ರಾಜೆಕ್ಟ್ ತಂಡದ ಸದಸ್ಯರಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗವು ಎಂ ಕ್ಯಾಮ್ ( ಸ್ಮಾರ್ಟ್ ಸೆಕ್ಯೂರಿಟಿ ಕ್ಯಾಮೆರಾ ) ಎಂಬ ಪ್ರಬಂಧ ಪ್ರಸ್ತುತಪಡಿಸಿದ್ದು, ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ಅಭಿಷೇಕ್ ಪ್ರಶಾಂತ್ ಮತ್ತು ರವಿಶಂಕರ್ ಪಾಟೀಲ್ ತಂಡದ ಸದಸ್ಯರಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ , ವ್ಯವಸ್ಥಾಪಕ ಚಂದ್ರನಾಥ್ ಜೈನ್, ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version