ಬೆಳ್ತಂಗಡಿ; ಕಲ್ಲಿಗೆ ಎಂಬ ಸಿನೇಮಾದಲ್ಲಿರುವ ದೈವ ಕೋಲದ ದೃಶ್ಯಗಳನ್ನು ನಲಿಕೆ ಸಮುದಾಯವರು ಮಾಡಿದ್ದಾರೆ ಎಂದು ಚಿತ್ರ ತಂಡ ಸುಳ್ಳು ಹೇಳಿರುವುದನ್ನು ಖಂಡಿಸಿ ಹಾಗೂ ದೈವನರ್ತಕರನ್ನು ಕಮೆಂಟ್ ಮೂಲಕ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮಾಜ ಬಾಂಧವರು ಸೆ 22. ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾಕರ ಓಡಿಳ್ಳಾಳ, ಸಂಘದ ಸದಸ್ಯರಾದ ಸಂತೋಷ್ ನಾರಾವಿ, ಮಾಜಿ ಅಧ್ಯಕ್ಷರಾದ ಸೇಸಪ್ಪ ಅಳದಂಗಡಿ, ಹಿರಿಯ ದೈವ ನರ್ತಕರಾದ ವೀರಪ್ಪ ಇದು, ಗಿರಿಯಪ್ಪ ಎತ್ತೂರು, ಗೋಪಾಲ ಕೇಲ, ನಾರಾಯಣ ವೇಣೂರು, ಬಾಬು ಪೊಸಲಾಯ ಕಾಂತಪ್ಪ ಪೆರಿಂಜೆ, ರಮೇಶ್ ಪೆರಿಂಜೆ, ಪ್ರಮುಖರಾದ ಗಣೇಶ್ ಕೋಟ್ಯಾನ್ ಚಾರ್ಮಾಡಿ, ಹರೀಶ್ ನಾವೂರು, ಶೇಖರ್ ವಾಲ್ಪಾಡಿ, ಸಂಪತ್ ವಾಲ್ತಾಡಿ, ನಾಗೇಶ್ ಉಡುಪಿ, ರವಿ ಎಂ.ಎಲ್ ಮುಂಡಾಜೆ, ಜಯಂತ ಇದು ಮತ್ತು ನಲಿಕೆ ಸಮಾಜ ಬಂಧುಗಳು ಉಪಸ್ಥಿತರಿದ್ದರು