ಬೆಳ್ತಂಗಡಿ : 2016ರಲ್ಲಿ ಮಕ್ಕಳ ರಕ್ಷಣಾ ನೀತಿ ಜಾರಿಗೆ ಬಂದರೂ ದೇಶದ 42% ಮಕ್ಕಳ ಧ್ವನಿ ಕೇಳುವುದೇ ಇಲ್ಲ ಎಂದು ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಅವರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಮಕ್ಕಳ ಹಕ್ಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಮಾತನಾಡುತ್ತಾ
ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖಾ ವಿದ್ಯಾರ್ಥಿ ನಿಲಯ ಹಾಗೂ ತಾಲೂಕಿನ ಶಾಲಾ ಕಾಲೇಜುಗಳ ಸ್ಥಿತಿಗತಿ ಮಾಹಿತಿ
ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ 18 ವರ್ಷದೊಳಗಿನ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಮಾಹಿತಿ, ಜಾಗೃತಿ ಕಾರ್ಯಕ್ರಮಗಳ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರು.
ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ,
ಪೊಲೀಸ್ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ , ಕಾರ್ಮಿಕ ಇಲಾಖೆ,
ತಾಲೂಕು ಪಂಚಾಯತ್ ಮತ್ತಿತರ ಇಲಾಖಾಧಿಕಾರಿಗಳೊಂದಿಗೆ ಸಂವಾದ ನಡೆಸಿ ವಿವರ ಪಡೆದು ಪ್ರಗತಿ ಪರಿಶೀಲಿಸಿದರು.
ಎಲ್ಲಾ ಆಡಳಿತಗಳಲ್ಲಿ , ಇಲಾಖೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ, ಆಯಾ ಇಲಾಖಾ ಅನುದಾನಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪಾಲಿರಲಿಆ ಮೂಲಕ ಮಕ್ಕಳ ಸ್ನೇಹಿ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಯೋಜನೆಗಳು ಅಥವಾ ಸಮಿತಿ , ಸಂಘಗಳು ಇದ್ದರೆ ಸಾಲದು ಮೂಲ ಉದ್ದೇಶ ಈಡೇರಬೇಕು ಯೋಜನೆಗಳು ಅನುಷ್ಠಾನದ ಬಗ್ಗೆ ಹೆಚ್ಚು ಗಮನ ಕೊಡುವಂತಾಗಲಿ ಎಂದರು.ಗ್ರಾಮಪಂಚಾಯತ್ ಗಳಲ್ಲಿ ಎಸ್ಸಿ,ಎಸ್ಟಿ ಅನುದಾನದಿಂದ ಅಂತ್ಯ ಸಂಸ್ಕಾರಕ್ಕೆ ಮಾತ್ರ ವಿತರಿಸುವುದಲ್ಲ ಜೀವಂತ ಇರುವವರಿಗೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಎಲ್ಲಾ ಸಂಘಗಳಂತೆ ಇದೂ ಒಂದು ಸಂಘ ಆಗಬಾರದು
ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಅನುಷ್ಠಾನವಾಗಬೇಕು
ಪ್ರೌಢ ಶಾಲೆ ಮತ್ತು ಪ.ಪೂ. ಕಾಲೇಜುಗಳಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ನಡೆಸಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಮಾಹಿತಿಯೊಂದಿಗೆ ಜಾಗೃತಿ ಮೂಡಿಸಬೇಕು ಮಹಿಳಾ ಮತ್ತು ‘ಮಕ್ಕಳ ಹಕ್ಕುಗಳ ರಕ್ಷಣಾ ಕಾವಲು ಸಮಿತಿ’ಗಳು ಕ್ರಿಯಾಶೀಲವಾಗಿರಬೇಕು ಎಂದ
ಅವರು ಮಕ್ಕಳ ಸ್ನೇಹೀ ತಾಲೂಕಾಗಿ ಪರಿವರ್ತಿಸಲು ಕರೆಯಿತ್ತರು.
ಬೆಳ್ತಂಗಡಿ ತಹಶೀಲ್ದಾರ್ಪೃಥ್ವೀ ಸಾನಿಕಂ, ಸಿಡಿಪಿಒ ಪ್ರಿಯಾ ಆಗ್ನೇಸ್, ಬಿ.ಇ.ಒ. ತಾರಾಕೇಸರಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.