Home ಸ್ಥಳೀಯ ಸಮಾಚಾರ ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈಧ್ಯಕೀಯ ಶಿಬಿರ

ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈಧ್ಯಕೀಯ ಶಿಬಿರ

0


ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಜ್ಯೋತಿ ಆಸ್ಪತ್ರೆ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು. ಆಸ್ಪತ್ರೆಯ ಆಡಳಿತಾಧಿಕಾರಿಯವರಾದ ಸಿಸ್ಟರ್.ಮೆರಿಟ್‌, ಡಾ.ಸಿಸ್ಟರ್.ಜೆನಿಫರ್‌, ವೈದ್ಯಾಧಿಕಾರಿಗಳು, ಡಾ.ನವ್ಯಾ ಪೌಲ್‌, ವೈದ್ಯಾಧಿಕಾರಿಗಳು, ಶ್ರೀಮತಿ. ಜೆಸಿಂತಾ ತೌರೋ, ಲೆಕ್ಕಿಗರು, ಸಿಸ್ಟರ್. ಡಾನಿಶಾ, ಶುಶ್ರೂಷಕಿ, ಹಾಗೂ .ರಂಜಿತ್‌, ಪಿ.ಆರ್.ಒ ಮುಂತಾದವರು ಭಾಗವಹಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.
ದಯಾ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್‌ ಮಸ್ಕರೇನಸ್‌ ರವರು ಆಗಮಿಸಿದ ವೈದ್ಯಕೀಯ ತಂಡವನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಈ ಶಿಬಿರದಲ್ಲಿ ಶಾಲೆಯ 82 ಮಕ್ಕಳು ಭಾಗವಹಿಸಿ ಸೂಕ್ತ ಚಿಕಿತ್ಸೆ ಹಾಗೂ ವೈಧ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡರು.

NO COMMENTS

LEAVE A REPLY

Please enter your comment!
Please enter your name here

Exit mobile version