ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಎರಡು ಲಕ್ಷ ರೂ.ಗಿಂತ ಅಧಿಕ ನಷ್ಟ ಸಂಭವಿಸಿದೆ.
ಮುಂಡಾಜೆ ಗ್ರಾಮದ ಬಲ್ಯಾರ್ ಕಾಪು ರಸ್ತೆಯ ಹೊಸ ಗದ್ದೆ ಬಾಲಕೃಷ್ಣ ಶೆಟ್ಟಿಯವರ ರಬ್ಬರ್ ಸ್ಮೋಕ್ ಹೌಸ್ ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿ ಸುಮಾರು 3ಕ್ವಿಂಟಲ್ ರಬ್ಬರ್ ಹಾಗು ಒಂದು ಕ್ವಿಂಟಾಲ್ ಅಡಕೆ ಬೆಂಕಿಗೆ ಆಹುತಿಯಾಗಿದೆ.
ಸ್ಮೋಕ್ ಹೌಸ್ ನ ಶೀಟುಗಳು ಸುಟ್ಟು ಹೋಗಿವೆ.
ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಹತೋಟಿಗೆ ತರಲು ಸಹಕರಿಸಿದರು.ಆದರೂ ಸ್ಮೋಕ್ ಹೌಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.