Home ಸ್ಥಳೀಯ ಸಮಾಚಾರ ಬಂದಾರು: ಮೈರೋಳ್ತಡ್ಕ ಸದಾಶಿವ ಯುವಕ ಮಂಡಲ ದಿವ್ಯಶ್ರೀ ಮಹಿಳಾ ಮಂಡಲ ಇದರ ಸಂಯುಕ್ತ ಆಶ್ರಯದಲ್ಲಿ 35ನೇ...

ಬಂದಾರು: ಮೈರೋಳ್ತಡ್ಕ ಸದಾಶಿವ ಯುವಕ ಮಂಡಲ ದಿವ್ಯಶ್ರೀ ಮಹಿಳಾ ಮಂಡಲ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ

0

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಸದಾಶಿವ ಯುವಕ ಮಂಡಲ (ರಿ.) ಮೈರೋಳ್ತಡ್ಕ ಮತ್ತು ದಿವ್ಯಶ್ರೀ ಮಹಿಳಾ ಮಂಡಲ (ರಿ.) ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಆಟೋಟ ಸ್ಪರ್ಧೆ, ಶ್ರೀ ಕುರಾಯ ಸದಾಶಿವ ಮಕ್ಕಳ ಭಜನಾ ತಂಡದಿಂದ ನೃತ್ಯ ಭಜನೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ರವಿ ಭೀಮ್ ಭಟ್ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು, ಪ್ರಗತಿಪರ ಕೃಷಿಕರಾದ ಚಂದಪ್ಪ ಪೂಜಾರಿ ಮಲ್ಲಕಂಬ ಸ್ಪರ್ಧೆಗೆ ಚಾಲನೆ ನೀಡಿದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಉಪಸ್ಥಿತರಿದ್ದರು.


ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಯುವಕ ಮಂಡಲ ಅಧ್ಯಕ್ಷರು, ಕಾರ್ಯದರ್ಶಿ ಪದಾಧಿಕಾರಿಗಳು ಸರ್ವ-ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version