Home ಅಪರಾಧ ಲೋಕ ನೆರಿಯ ದೇವಗಿರಿಯಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ನೆರಿಯ ದೇವಗಿರಿಯಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

941
0

ಬೆಳ್ತಂಗಡಿ; ನೆರಿಯ ಗ್ರಾಮದ ದೇವಗಿರಿ ನಿವಾಸಿಯಾಗಿರುವ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿ ಸ್ಥಳಿಯ ಪನಚ್ಚಿಕಲ್ ಜೋಸಫ್ (40) ಎಂಬಾತ ನಾಗಿದ್ದಾನೆ.
ಈತ ಆ 31ರಂದು ಮನೆಯಲ್ಲಿ ಹುಲ್ಲಿಗೆ ಸಿ‌ಂಪಡಿಸಲು ತಂದಿರಿಸಿದ್ದ ವಿಷವನ್ನು ತೆಗೆದು ಕುಡಿದಿದ್ದಾನೆ. ಕೂಡಲೇ ಮನೆಯವರು ಆತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಈತ ಸೆ‌4 ರಂದು ಮೃತ ಪಟ್ಟಿದ್ದಾನೆ.


ಮೃತ ಜೋಸೆಫ್‌ ಪತ್ನಿಯೊಂದಿಗೆ ಸದಾ ಜಗಳಾಡುತ್ತಿದ್ದ ಎನ್ನಲಾಗಿದ್ದು ಇದೇ ಕಾರಣಕ್ಕೆ ಆತನ ಪತ್ನಿ ಮಕ್ಕಳೊಂದಿಗೆ ಆ28 ರಂದು ಮನೆಯಿಂದ ತಾಯಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here