Home ಸ್ಥಳೀಯ ಸಮಾಚಾರ ಪದ್ಮುಂಜ : ಸಹಕಾರ ಸಂಘದ ಮಹಾಸಭೆ ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾನಿಧಿ ವಿತರಣೆ

ಪದ್ಮುಂಜ : ಸಹಕಾರ ಸಂಘದ ಮಹಾಸಭೆ ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾನಿಧಿ ವಿತರಣೆ

0

ಪದ್ಮುಂಜ : ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ,ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್, ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಸೆ 1ರoದು ಸಂಘದ ಸಭಾಭವನ ದಲ್ಲಿ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಸಂಘವು 2023-24 ನೇ ಸಾಲಿನಲ್ಲಿ ರೂ.360.99 ಕೋಟಿ ವ್ಯವಹಾರ, ರೂ.1.81 ಕೋಟಿ ನಿವ್ವಳ ಲಾಭ, ಶೇ.13 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅಂಕಿತಾ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಅಶೋಕ ಗೌಡ,ನಿರ್ದೇಶಕರಾದ ಉದಯ ಬಿ.ಕೆ,ಉದಯ ಭಟ್,ನಾರಾಯಣ ಗೌಡ, ರಾಜೀವ ರೈ,ವಿನಯಶ್ರೀ, ಶೀಲಾವತಿ, ದಿನೇಶ್ ನಾಯ್ಕ್, ಪಿಜಿನ ಮುಗೇರ, ಬ್ಯಾಂಕ್ ಪ್ರತಿನಿಧಿ ಸುದರ್ಶನ್, ಸಿಬ್ಬಂದಿ ವರ್ಗ, ಸಂಘದ ಸದಸ್ಯರು ಉಪಸ್ಥಿತರಿದ್ದರು

NO COMMENTS

LEAVE A REPLY

Please enter your comment!
Please enter your name here

Exit mobile version