Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆರೂ.43..41 ಲಕ್ಷ ನಿವ್ವಳ ಲಾಭ,...

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆರೂ.43..41 ಲಕ್ಷ ನಿವ್ವಳ ಲಾಭ, ಶೇ.15 ಡಿವಿಡೆಂಟ್ ಘೋಷಣೆ.

455
0

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2023-24 ನೇ ಸಾಲಿನ 14 ನೇ ವಾರ್ಷಿಕ ಮಹಾಸಭೆ ಆಗಸ್ಟ್ 31 ರಂದು ಸಂಘದ ಕಛೇರಿ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ.ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು. 2023-24 ನೇ ಸಾಲಿನಲ್ಲಿ ರೂ 106 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ 43.41 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರಿ. ಅನಿಲ್ ಎ.ಜೆ ರವರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಶ್ರೀ. ಜಾರ್ಜ್ ಎಮ್. ವಿ ರವರು ಸ್ವಾಗತಿಸಿದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ 2023-24 ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು


ನಿರ್ದೇಶಕರುಗಳಾದ ಸೆಭಾಸ್ಟೀನ್ ವಿ.ಟಿ, ಜ್ಯೆಸನ್ ಪಟ್ಟೇರಿಲ್, ಅಂದಾನಿ ಕೆ.ಡಿ, ಬಾಬು ತೋಮಸ್, ಬಿಜು ಪಿ.ಪಿ, ಬಿಜು ಎಮ್.ಜೆ, ಸೆಭಾಸ್ಟೀನ್, ಸೋಪಿ ಜೋಸೆಫ್, ಫಿಲೋಮಿನಾ ವಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾಗಿ ಸಂಘದ ಅಭಿವೃದ್ದಿಯಲ್ಲಿ ಪ್ರಾಮಾಣಿಕ ಸೇವೆಗೈದ ಸಂಘದ ಬೆಳವಣಿಗೆಗೆ ಕಾರಣಕರ್ತರಾದ ಪ್ರಥಮ ಮತ್ತು ದ್ವಿತೀಯ ಆಡಳಿತ ಮಂಡಳಿ ಸದಸ್ಯರನ್ನು ಸನ್ನಾನಿಸಲಾಯಿತು ಮತ್ತು ಬೆಳ್ತಂಗಡಿ ತಾಲ್ಲೂಕಿನಲ್ಲಿರುವ 16 ಸಿರೋ ಮಲಬಾರ್ ದೇವಾಲಯದ 2023-24 ನೇ ಸಾಲಿನ S.S.L.C ವಿದ್ಯಾಥಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ನಿರ್ದೇಶಕ ಜ್ಯೆಸನ್ ಪಟೇರಿಲ್ ರವರು ವಂದಿಸಿ, ಕಾರ್ಯ ಕ್ರಮ ಯಶ್ವಸಿಯಾಗಿ ನಡೆಸಲು ಶಾಖಾ ವ್ಯವಸ್ಥಾಪಕರಾದ ಮ್ಯಾಧ್ಯು ಕೆ.ಕೆ, ಸುಜಾ ಜೇಮ್ಸ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಬೆಳ್ತಂಗಡಿ ಶಾಖಾ ವ್ಯವಸ್ಥಾಪಕರಾದ ರೇಷ್ಮಾ ಅಬ್ರಾಹಂ ರವರು ನಿರೂಪಿಸಿದರು.

LEAVE A REPLY

Please enter your comment!
Please enter your name here