ಬೆಳ್ತಂಗಡಿ; ಕಳಿಯ ಗ್ರಾಮ ಪಂಚಾಯತ್ ನಲ್ಲಿ ಹಲವಾರು ವರ್ಷಗಳಿಂದ ಬಡವರು ನಿವೇಶನಕ್ಕೆ ಅರ್ಜಿ ಸಲ್ಲಿಸುತ್ತಲೇ ಬರುತ್ತಿದ್ದು ಯಾವುದೇ ಹಕ್ಕು ಪತ್ರವನ್ನು ನೀಡಲು ಸಾದ್ಯವಾಗುತ್ತಿರಲಿಲ್ಲ.
ಪಂಚಾಯತ್ ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಆಡಳಿತ ಮಂಡಳಿಯ ಒಮ್ಮತದ ತೀರ್ಮಾನದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಗುರುತಿಸುವಿಕೆಗಾಗಿ ಮಾನ್ಯ ಜಿಲ್ಲಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು.

ಬೇಟಿಯ ನಿಯೋಗದಲ್ಲಿ ಅಧ್ಯಕ್ಷರಾದ ದಿವಾಕರ ಎಂ, ಉಪಾದ್ಯಕ್ಷೆ ಶ್ರೀಮತಿ ಇಂದಿರಾ, ಕಾರ್ಯದರ್ಶಿ ಕುಂಙ ಕೆ, ಸದಸ್ಯರಾದ ಅಬ್ದುಲ್ ಕರೀಮ್,ಸುದಾಕರ ಮಜಲು, ಲತೀಫ್ ಪರಿಮ,ಶ್ರೀಮತಿ ಮೋಹಿನಿ,ಶ್ರೀಮತಿ ಮರೀಟಾ ಪಿಂಟೋ,ಶ್ರೀಮತಿ ಪುಷ್ಪಾ, ಶ್ರೀಮತಿ ಶ್ವೇತಾ ಇದ್ದರು










