Home ಸ್ಥಳೀಯ ಸಮಾಚಾರ ಚಾರ್ಮಾಡಿ; ಮಳೆಯ ನಡುವೆಯೂ ಕುಡಿಯುವ ನೀರಿಗಾಗಿ ಪ್ರತಿಭಟನೆ

ಚಾರ್ಮಾಡಿ; ಮಳೆಯ ನಡುವೆಯೂ ಕುಡಿಯುವ ನೀರಿಗಾಗಿ ಪ್ರತಿಭಟನೆ

0

ಬೆಳ್ತಂಗಡಿ; ಚಾರ್ಮಾಡಿ ಗ್ರಾಮಪಂಚಾಯತಿನ ಬೀಟಿಗೆ ಪ್ರದೇಶದ ಹಲವು ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಸ್ಥಗಿತಗೊಂಡಿದ್ದು ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಗುರುವಾರ ಬೆಳಗ್ಗೆ ಚಾರ್ಮಾಡಿ ಗ್ರಾ.ಪಂ ನ ಎದುರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಕಚೇರಿ ತೆರೆಯುವ ಮೊದಲೇ ಗ್ರಾಮಪಂಚಾಯತಿನ ಎದುರು ಪ್ರತಿಭಟನೆ ಆರಂಭಿಸಿದ ಜನರು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಿದ ಬಳಿಕ ಮಾತ್ರ ಗ್ರಾ.ಪಂ ಕಚೇರಿಯ ಬಾಗಿಲು ತೆರೆಯಲು ಅವಕಾಶ ನೀಡುವುದಾಗಿ ತಿಳಿಸಿ ಪ್ರತಿಭಟನೆ ಮುಂದು ವರಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾ ಕಾರರೊಂದಿಗೆ ಮಾತುಕತೆ ನಡೆಸಿದರು. ಬೋರ್ ಹಾಳಾಗಿದೆ ಪಂಪ್ ಹಾಳಾಗಿದೆ ಎಂದು ಹೇಳಿ ಹತ್ತು ದಿನಗಳಾಯಿತು ಇನ್ನೂ ಸರಿಪಡಿಸಿಲ್ಲ ನಾವು ಮಳೆ ನೀರು ಕುಡಿಯಬೇಕಾದ ಸ್ಥಿತಿಯಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.


ಈ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯರಾದ ಅಬ್ದುಲ್ ನಝೀರ್ ಹಾಗೂ ಅಬ್ದುಲ್ ಖಾದರ್ ಅವರು ವಹಿಸಿದ್ದರು.
ಪ್ರತಿಭಟನೆಯ ಬಳಿಕ ಗ್ರಾ.ಪಂ ಆಡಳಿತ ಎಚ್ಚೆತ್ತುಕೊಂಡಿದ್ದು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕುಡಿಯುವ ನೀರಿನ ಸಂಪರ್ಕ ಸರಿಪಡಸಲು ಕ್ರಮ ಆರಂಭಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version