ಬೆಳ್ತಂಗಡಿ: ಉಜಿರೆಯ ಸೆಬಾಸ್ಟಿನ್ ಆಟೋ ಇಂಜಿನಿಯರಿಂಗ್ ವರ್ಕ್ ಇದರ ಹಿಂಭಾಗದ ನಿವಾಸಿ ಸುರೇಶ (38ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ 21 ಬುಧವಾರ ನಡೆದಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಇವರ ಮೃತದೇಹ ಪತ್ತೆಯಾಗಿದೆ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಇವರು ಅವಿವಾಹಿತರಾಗಿದ್ದರು. ಮೃತರು ತಾಯಿಯನ್ನು ಅಗಲಿದ್ದಾರೆ.