ಬೆಳ್ತಂಗಡಿ; ಸೋಮವಾರ ಸಂಜೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದು ಹಲವೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲವಂತಿಗೆ ಗ್ರಾಮದ ಮಲ್ಲ ನಂದಿಕಾಡು ರಸ್ತೆ, ಕೊಟರಿಮಾರ್ ಅರ್ತಿದಡಿ ಹರೀಶ್ ಗೌಡ ಅವರ ಮನೆ, ಕಜಕೆ ನೇಲೆಕ್ಕಿಲ್ ನಾರಾಯಣ ಮಲೆಕುಡಿಯ ಮನೆಗೆ, ಕಜಕೆ ಶಾಲೆ, ಪಂಚಾಯತ್, ಮಿತ್ತಬಾಗಿಲು ಗ್ರಾಮದ ಬಿರ್ಮನೊಟ್ಟು ತಡೆಗೋಡೆ ಹಾನಿ ಸ್ಥಳ, ರಾಜಪ್ಪ ಗೌಡರ ಮನೆ, ಮಿತ್ತಬಾಗಿಲು ಗುತ್ತು ಮನೆಯಿಂದ ತೋಟಕ್ಕೆ ಹಾನಿ, ಕೂಡಬೆಟ್ಟು ಸದಾಶಿವ ದೇವಸ್ಥಾನ, ಪಿಲತ್ತಡಿ ದಡ್ಡು, ಕುಕ್ಕಾವು ಸೇತುವೆ, ಬೊಳ್ಳಾಜೆ ಮೋರಿ ಕುಸಿತ ಸ್ಥಳಕ್ಕೆ ಹರೀಶ್ ಪೂಂಜ ಅವರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯ ಗೌಡ, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕರಣಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು