ಬೆಳ್ತಂಗಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ನಡೆಸುತ್ತಿರುವ ಷಡ್ಯಂತ್ರ ಮತ್ತು ಮುಖ್ಯಮಂತ್ರಿಗಳ ಮೇಲೆ ನೀಡಿರುವ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ
ರಾಜ್ಯಪಾಲರ ನಡೆ ಖಂಡಿಸಿ ಬೆಳ್ತಂಗಡಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದು ತಾಲ್ಲೂಕು ಕಛೇರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಕೊಡಲಾಯಿತು.
ಬಿಜೆಪಿ ಕೈ ಗೊಂಬೆಯಾಗಿ ವರ್ತಿಸುತ್ತಿರುವ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಿಣ ಬ್ಲಾಕ್ ಅಧ್ಯಕ್ಷರಾದ ನಾಗೇಶ್ ಗೌಡ ರವರು, ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಧರಣೇಂದ್ರ ಕುಮಾರ್ ರವರು, ಶೇಖರ್ ಕುಕ್ಕೆಡಿ ರವರು, ಮಹಿಳಾ ಕಾಂಗ್ರೆಸಿನ ಸದಸ್ಯರು, ಯುವ ಕಾಂಗ್ರೆಸಿನ ಸದಸ್ಯರು, ಎನ್.ಎಸ್.ಯು.ಐ ಮತ್ತು ಎಲ್ಲಾ ಮುಂಚೂಣಿ ಘಟಕದವರು ಭಾಗವಹಿಸಿದರು.ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.