ಬೆಳ್ತಂಗಡಿ; ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಅಧಿಕಾರಿಗಳಾದ ಜಿನೇಂದ್ರ ಕೋಟ್ಯಾನ್ ಅವರು ಇಂದು ಬೆಳ್ತಂಗಡಿ ತಾಲೂಕಿನ ಗರ್ಡಾಡಿ, ಹಚ್ಚಾಡಿ,
ಶ್ರೀ ಕ್ಷೇತ್ರ ಚಂದ್ರಪರ ಶಿಶಿಲ, ಪೆರ್ಮಾಣು ನಡ, ಬಂಗಾಡಿ, ಬಸದಿಗಳಿಗೆ ಭೇಟಿ ನೀಡಿ ಬಸದಿಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆ ಮಾಹಿತಿಗಳನ್ನು ನೀಡಿ ದಾಖಲಾತಿಗಳನ್ನು ನೀಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಡಾ. ಕೆ. ಜಯಕೀರ್ತಿ ಜೈನ್, ಧರ್ಮಸ್ಥಳ, ನವೀನ್ ಚಂದ್ ಬಲ್ಲಾಳ್ ಹಚ್ಚಾಡಿ, ಶಶಿಕಿರಣ್ ಜೈನ್ ಬೆಳ್ತಂಗಡಿ, ಧನಂಜಯ ಅಜ್ರಿ ನಡ, ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ. ವಿಕಾಸ್ ಜೈನ್ ನಡ ಮುಂತಾದವರಿದ್ದು ಬಸದಿಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಅಧಿಕಾರಿಗಳಿಗೆ ಡಾ. ಕೆ ಜಯಕೀರ್ತಿ ಜೈನ್ ಅಭಿನಂದನೆಗಳನ್ನು ಸಲ್ಲಿಸಿದರು.