
ನವದೆಹಲಿ : ಆ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಹ್ಯೂಮನಿಟೆರಿಯನ್ ದಿನದ ಪ್ರಯುಕ್ತ ಹ್ಯೂಮನಿಟೆರಿಯನ್ ಸಂಸ್ಥೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದಲ್ಲಿ ನೀಡುವಂತಹ ಪ್ರಶಸ್ತಿಯಾದ ಹ್ಯೂಮನಿಟೆರಿಯನ್ ಎಕ್ಸಲೆನ್ಸ್ ಅವಾರ್ಡ್ ಅನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಫಾ.ಆದರ್ಶ್ ಜೋಸೆಫ್ ಅವರಿಗೆ ನೀಡಿ ಗೌರವಿಸಿದೆ.
ಅವರು ವಿವಿಧ ಸಂಸ್ಥೆಗಳ ಮೂಲಕ ಹಾಗೂ ವೈಯುಕ್ತಿಕವಾಗಿ ಸಮಾಜಕ್ಕೆ ನೀಡಿದ ವಿವಿಧ ಸೇವೆಯನ್ನು ಪರಿಗಣಿಸಿ ಫಾ. ಆದರ್ಶ್ ಜೋಸೆಫ್ ಅವರಿಗೆ ” ಈ ವರ್ಷದ ಹ್ಯೂಮನಿಟೀರಿಯನ್ ಎಕ್ಸಲೆನ್ಸ್ ಅವಾರ್ಡ್ 2024 ” ನೀಡಿ ಗೌರವಿಸಲಾಯಿತ್ತು. ಕೇಂದ್ರ ಸರಕಾರದ ಮಾಜಿ ಸಚಿವರಾದ ಸಂತೋಷ್ ಬಗ್ರೋಡಿಯಾ ಹಾಗೂ ಕಿರು ತೆರೆ ತಾರೆ ಸುರೇಂದ್ರ ಪಾಲ್ ಅವರಿಂದ ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕೋವಿಡ್ 19 ರ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಮಾಡಿದ ಸಮಾಜಸೇವೆಯನ್ನು ಸಂಸ್ಥೆ ಶ್ಲಾಘಸಿದೆ. ತನ್ನ ವಯುಕ್ತಿಕ ವಾಹನದಲ್ಲಿ ನೂರಕ್ಕೂ ಅಧಿಕ ಕೋವಿಡ್ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗಳಿಗೆ ಉಚಿತ ವಾಗಿ ರವಾನೆ ಮಾಡುವುದರ ಮೂಲಕ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಫಾ ಆದರ್ಶ್ ಜೋಸೆಫ್ ಅವರು ಯಶ್ವಸಿಯಾಗಿದ್ದರು.
ಅದರೊಂದಿಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮದಲ್ಲಿ ತನ್ನನೇ ತೊಡಗಿಸಿಕೊಂಡು ಬಂದಿರುವ ಇವರು ಜಾತಿ, ಧರ್ಮ ವ್ಯೆತ್ಯಾಸವಿಲ್ಲದೆ ನಿರಂತರವಾಗಿ ಮಾಡುವ ಮಾನವ ಸೇವೆಯನ್ನು ಸಂಸ್ಥೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ.
ಸಮಾಜದ ಎಲ್ಲರನ್ನು ಒಟ್ಟುಸೇರಿಸಿ ಸಮಾಜದಲ್ಲಿ ಶಾಂತಿ ಸಾಮರಸ್ಯ ಬೆಳೆಸಬೇಕೆಂಬ ಉದ್ದೇಶ ದಿಂದ ಹಲವಾರು ಕಾರ್ಯಕ್ರಮದ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ.
ಪ್ರಸ್ತುತ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಗುತ್ತಿಗಾರು ಹಾಗೂ ನೆಟ್ಟಣ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಧರ್ಮಪ್ರಾಂತ್ಯದ ಕೆ.ಎಸ್.ಎಂ.ಸಿ ಎ ಸಂಘಟನೆಯ ನಿರ್ದೇಶಕ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.