Home ಅಪಘಾತ ಸ್ವಾತಂತ್ರ್ಯ ದಿನಾಚರಣೆಯ ಧ್ವಜ ಇಳಿಸುವ ವೇಳೆ ವಿದ್ಯುತ್‌ ತಗುಲಿ ಚರ್ಚ್ ಫಾದರ್ ಮೃತ್ಯು

ಸ್ವಾತಂತ್ರ್ಯ ದಿನಾಚರಣೆಯ ಧ್ವಜ ಇಳಿಸುವ ವೇಳೆ ವಿದ್ಯುತ್‌ ತಗುಲಿ ಚರ್ಚ್ ಫಾದರ್ ಮೃತ್ಯು

0

ಕಾಸರಗೋಡು; ಸ್ವಾತಂತ್ರ್ಯ ದಿನಾಚರಣೆಗೆ ಹಾರಿಸಲಾಗಿದ್ದ ಧ್ವಜ ಇಳಿಸುವ ವೇಳೆ ಧ್ವಜ ಸ್ತಂಭ ವಿದ್ಯುತ್ ಲೈನಿಗೆ ತಾಗಿ ವಿದ್ಯುತ್ ಶಾಕ್ ಹೊಡೆದು ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿರುವ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಕುಡಿಲಿಲ್ ಮ್ಯಾಥ್ಯು (ಶಿನ್ಸ್ ಅಗಸ್ಟಿನ್) (29) ಮೃತಪಟ್ಟ ಘಟನೆ ಸಂಭವಿಸಿದೆ.


ಚರ್ಚ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಧ್ವಜಾರೋಹಣ ‌ಮಾಡಲಾಗಿತ್ತು ಸಂಜೆಯ ವೇಳೆ ಧ್ವಜವನ್ನು ಇಳಿಸುತ್ತಿದ್ದಾಗ ಕಬ್ಬಿಣದ ಧ್ವಜ ಸ್ತಂಭ ಮಗುಚಿ ಬಿದ್ದಿದೆ ಮಗುಚಿ ಬಿದ್ದ ಧ್ವಜ ಸ್ತಂಭವು ಹತ್ತಿರದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು ಇದರ ಪರಿಣಾಮವಾಗಿ ವಿದ್ಯುತ್ ಹರಿದು ಫಾದರ್ ಮ್ಯಾಥ್ಯು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಸಹಾಯಕ ಧರ್ಮಗುರುಗಳಾದ ಸೆಬಿನ್ ಜೋಸೆಫ್ (28) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


2020 ರಲ್ಲಿ ಧರ್ಮಗುರುಗಳಾಗಿ ಅಭಿಷಕ್ತರಾದ ಶಿನ್ಸ್ ಅವರು ಒಂದುವರೆ ವರ್ಷದ ಹಿಂದೆ ಮುಳ್ಳೆರಿಯಾ ಚರ್ಚ್ ನಲ್ಲಿ ಧರ್ಮಗುರು ಗಳಾಗಿ ಆಗಮಿಸಿದ್ದರು.
ಇವರು ಪುತ್ತೂರಿನ ಸೈಟ್ ಫಿಲೋಮಿನಾ ಕಾಲೇಜಿನಲ್ಲಿ ಎಂ.ಎಸ್. ಡಬ್ಲ್ಯು ಎರಡನೇ ವರ್ಷದ ವಿಧ್ಯಾರ್ಥಿಯಾಗಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version