Home ಸ್ಥಳೀಯ ಸಮಾಚಾರ ಡಿ. ಕೆ.ಆರ್.ಡಿ.ಎಸ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಡಿ. ಕೆ.ಆರ್.ಡಿ.ಎಸ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

118
0

ಬೆಳ್ತಂಗಡಿ;ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ಇದರ ನೇತೃತ್ವದಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳಿಗೋಸ್ಕರ ನಡೆಸುತ್ತಿರುವ ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್.ಎಂ.ವೈ.ಎಂ ಧರ್ಮಪ್ರಾಂತ್ಯ ಬೆಳ್ತಂಗಡಿ, ಕೃಪ ಸ್ವ-ಸಹಾಯ ಸಂಘ ತೋಟತ್ತಾಡಿ ಇವುಗಳ ಸಹಕಾರದೊಂದಿಗೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಎಸ್.ಎಂ.ವೈ .ಎಂ, ಮಾತೃವೇದಿ, ಫ್ಯಾಮಿಲಿ ಅಪೋಸ್ಟೆಲೆಟ್ ಬೆಳ್ತಂಗಡಿ ಈ ಸಂಘಟನೆಗಳ ನಿರ್ದೇಶಕರಾದ ವಂ.ಫಾದರ್ ಜೋಬಿ ಪುಲ್ಲಾಟ್ ಇವರು ಆಗಮಿಸಿ, ಶೋಷಿತ ವರ್ಗದವರಿಗೋಸ್ಕರ ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಅಭಿನಂದಿಸಿದರು, ಜೀವನದಲ್ಲಿ ಪರಸ್ಪರ ಜೊತೆಯಾಗಿ ನಿಲ್ಲುವ ಮೂಲಕ ವಂಚಿತರಾಗುತ್ತಿರುವ ವ್ಯಕ್ತಿಗಳ ಹಕ್ಕುಗಳಿಗೋಸ್ಕರ ಪ್ರವೃತಿಸಬೇಕೆಂದು ಕರೆ ನೀಡಿದರು.


ಎಸ್.ಎಂ.ವೈ.ಎಂ ಬೆಳ್ತಂಗಡಿ ಧರ್ಮಪ್ರಂತ್ಯದ ನೂತನ ಅಧ್ಯಕ್ಷರಾಗಿರುವ ಸಿರಿನ್ ತೋಮಸ್ ಇವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸುತ್ತಾ, ಭಾರತೀಯರು ನಿಷ್ಠಾವಂತ ಪ್ರಜೆಗಳಾಗಿ ಬದುಕುವ ಮೂಲಕ ಸಮಾಜದ ಯಶಸ್ವಿಗೆ ಕಾರಣರಾಗಬೇಕುಎಂದು ಕರೆ ನೀಡಿದರು.

ಕೃಪ ಸಂಘ ತೋಟತ್ತಾಡಿ ಇದರ ಅಧ್ಯಕ್ಷರಾದ ಜಯ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಪೌಷ್ಟಿಕ ಆಹಾರದ ಕಿಟ್ಟ್ ಗಳನ್ನು ವಿತರಿಸಿದರು.
ಎಸ್.ಎಂ.ವೈ.ಎಂ.ಬೆಳ್ತಂಗಡಿ, ಹಾಗು ನವಜೀವನ ಸಂಘದ ಸದಸ್ಯರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಮಾತನಾಡಿ ದೇಶಕೋಸ್ಕರ ನಮ್ಮತನದ ಕೊಡುಗೆಗಳನ್ನು ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ವಿನೂತನ ಹೆಜ್ಜೆಗಳನ್ನು ಇಡಲು ಶ್ರಮಿಸಬೇಕು ಎಂದರು.
ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶಾರದಾ ಪ್ರಾರ್ಥಸಿದರು. ಭರತ್ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ರೋಶ್ನಿ ನಿಲಯ, ಮಂಗಳೂರು ಇವರು ಸ್ವಾಗತಿಸಿದರು. ಜಾನ್ಸನ್ ಕಾರ್ಯಕರ್ತರು ಡಿ.ಕೆ.ಆರ್.ಡಿ .ಎಸ್ ಬೆಳ್ತಂಗಡಿ ಇವರು ವಂದಿಸಿದರು.
ಸಂಯೋಜಕಿ ಕು.ಶ್ರೇಯ ರವರು ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

LEAVE A REPLY

Please enter your comment!
Please enter your name here