Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳದಲ್ಲಿ ಹೆದ್ದಾರಿಗಿಳಿದ ಕಾಡಾನೆ ವಾಹನಗಳು ಜಖಂ

ಧರ್ಮಸ್ಥಳದಲ್ಲಿ ಹೆದ್ದಾರಿಗಿಳಿದ ಕಾಡಾನೆ ವಾಹನಗಳು ಜಖಂ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ‌ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ಗುರುವಾರ ಬೆಳಗ್ಗೆ 7.40 ರ ಸುಮಾರಿಗೆ ಕಾಡನೆ ಬೊಳಿಯಾರು ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಕಾಡನೆ ರಸ್ತೆಯಲ್ಲಿಯೇ ನಿಂತಿದ್ದು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ಕೆ.ಎಸ್.ಆರ.ಟಿ.ಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮು‌ಂಭಾಗಕ್ಕೆ ತಿವಿದಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಬಿಟ್ಟು ಅದರ ಸವಾರ ಆನೆಯಿಂದ‌ ತಪ್ಪಿಸಿಕೊಂಡಿದ್ದು ವಾಹನವನ್ನು ಕಾಡಾನೆ ಜಖಂಗೊಳಿಸಿದೆ.


ಇಲ್ಲಿನ ಬೊಳಿಯಾರು ಹಾಗೂ ಮುಳಿಕಾರು ಪರಿಸರದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು ಕೃಷಿಕರಿಗೆ ತೊಂದರೆ ಯುಂಟುಮಾಡುತ್ತಿದೆ.
ಇದೀಗ ಹೆದ್ದಾರಿಗೆ ಕಾಡಾನೆ ಇಳಿದಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version