Home ಬ್ರೇಕಿಂಗ್‌ ನ್ಯೂಸ್ ಭ್ರಷ್ಟಾಚಾರ ಮಾಡಿಲ್ಲ ಶಾಸಕ ಹರೀಶ್ ಪೂಂಜ ಅವರಿಂದ ಮಾರಿಗುಡಿಯಲ್ಲಿ ಪ್ರಮಾಣ

ಭ್ರಷ್ಟಾಚಾರ ಮಾಡಿಲ್ಲ ಶಾಸಕ ಹರೀಶ್ ಪೂಂಜ ಅವರಿಂದ ಮಾರಿಗುಡಿಯಲ್ಲಿ ಪ್ರಮಾಣ

0

ಬೆಳ್ತಂಗಡಿ ಒಂದು ರೂಪಾಯಿ ಮುಟ್ಟಿಲ್ಲ ಭ್ರಷ್ಟಾಚಾರ ಮಾಡಿಲ್ಲ ಒಂದು ವೇಳೆ ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ, ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಮಾಣ ಮಾಡಿದ್ದಾರೆ.

ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು ಈ ಬಗ್ಗೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುವುದಾಗಿ ಹೇಳಿದ್ದರು.
ಐ.ಬಿ ಯ ಕಾಮಗಾರಿಯಲ್ಲಿನ ಭ್ರಷ್ಠಾಚಾರ, ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಸೇರಿದಂತೆ ಹಲವು ಆರೋಪಗಳನ್ನು ರಕ್ಷಿತ್ ಶಿವರಾಂ ಶಾಸಕರ ವಿರುದ್ದ ಮಾಡಿದ್ದರು ಇದಕ್ಕೆ ಉತ್ತರಿಸಿದ ಶಾಸಕರು ಈ ಆರೋಪಗಳೆಲ್ಲ ಸುಳ್ಳು, ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಈ ಬಗ್ಗೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದಿದ್ದರು

ಅದರಂತೆ ಇದೀಗ ಬುಧವಾರ ಬೆಳಿಗ್ಗೆ ಶಾಸಕರು ಮಾರಿಗುಡಿಯಲ್ಲಿ ಪ್ರಮಾಣ ಮಾಡಿಭ್ರಷ್ಟಾಚಾರ ನಡೆಸಿಲ್ಲ ಡಿಪಿ ಜೈನ್ ಕಂಪನಿಯಿಂದ 3ಕೋಟಿ ಕಿಕ್ ಬ್ಯಾಕ್ ಪಡೆದಿಲ್ಲ ಒಂದು ರೂಪಾಯಿ ಹಣ ಯಾರಿಂದಲೂ ಪಡೆದಿಲ್ಲ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ಬೆಳ್ತಂಗಡಿಯ ಮಾರಿಗುಡಿಯ ಮಹಾದೇವಿ ನೀಡಲಿ. ಒಂದು ವೇಳೆ ಅವರು ಆರೋಪಿಸಿದಂತೆ ನಾನು ತಪ್ಪು ಮಾಡಿದ್ದರೆ ನನ್ನನ್ನೂ ಶಿಕ್ಷಿಸಲಿ ಎಂದು ಪ್ರಾರ್ಥಿಸಿದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ, ಜಯಾನಂದ ಗೌಡ ಪ್ರಶಾಂತ್ ಪಾರೆಂಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version