ಬೆಳ್ತಂಗಡಿ: ಬೈಕ್-ಪಿಕಪ್ ಅಪಘಾತ- ಬೈಕ್ ಸವಾರ ಗಂಭೀರ
ಬೆಳ್ತಂಗಡಿ: ಮಲೆಬೆಟ್ಟು ನಿನ್ನಿಕಲ್ಲು ರಸ್ತೆ ಬಳಿ ಬೈಕ್ ಮತ್ತು ಪಿಕಪ್ ವಾಹನ ಅಪಘಾತದಲ್ಲಿ ಕಾಲೇಜು ವಿಧ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಆ.13ರಂದು ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಗುರುವಾಯನಕೆರೆ ಖಾಸಗಿ ಕಾಲೇಜು ವಿದ್ಯಾರ್ಥಿ ಬೆಳಾಲು ಗ್ರಾಮದ ಮಂಜೂತ್ತು ಉಮೇಶ್ ಎಂ.ಜಿ. ಯವರ ಪುತ್ರ ಜೀವ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.