ಬೆಳ್ತಂಗಡಿ: ಹೊಂಡಮಯವಾಗಿರುವ ರಾಷ್ಟ್ರೀಯ ಹೆದ್ದಾರಿಯ ನಡುವೆ ಟ್ರಕ್ ಜಾಮ್ ಆಗಿ ಕಿ.ಮೀ ವಾಹನ ಸವಾರರರು ಗಂಟೆಗಟ್ಟಲೆ ಕಾಯವೇಕಾಗಿ ಬಂದ ಘಟನೆ ಆ.08 ಗುರುವಾರ ಕಾಶಿಬೆಟ್ಟುವಿನಲ್ಲಿ ಸಂಭವಿದೆ.
ಮಧ್ಯಾಹ್ನ ಸುಮಾರು 1:50ರ ವೇಳೆಗೆ ಬೆಳ್ತಂಗಡಿಯಿಂದ ಉಜಿರೆಗೆ ಬರುತ್ತಿದ್ದ ಟ್ರಕ್ ರಸ್ತೆಯಲ್ಲೆ ಜಾಮ್ ಆಗಿದ್ದು ಆ ಬಳಿಕ ಎರಡೂ ಕಡೆ ಸಾಗುವ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆ.
ಉಜಿರೆ ಹಾಗೂ ಬೆಳ್ತಂಗಡಿ ಕಡೆ ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಈ ಮಧ್ಯೆ ಬಂದ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಪರದಾಡಿದೆ.
ಉಜಿರೆಯಿಂದ ಬಂದ ಖಾಸಗಿ ಬಸ್ಸೊಂದು ಕಾಶಿಬೆಟ್ಟು ಬಸ್ ಸ್ಟಾಪ್ ನಲ್ಲಿದ್ದ ಸ್ವಲ್ಪ ಜಾಗದಲ್ಲೆ ತಿರುವು ಪಡೆದುಕೊಂಡು ವಾಪಾಸ್ಸಾಗಿದೆ.
ಕಾಶಿಬೆಟ್ಟುವಿನಲ್ಲಿ ರಸ್ತೆ ತೀರ ಕೆಟ್ಟು ಹೋಗಿದ್ದು ಭಾರೀ ಹೊಂಡಗಳು ನಿರ್ಮಾಣವಾಗಿದೆ. ಸಣ್ಣ ವಾಹನಗಳಂತೂ ಈ ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಪರಿಹಾರವೇ ಕಾಣದ ಸಮಸ್ಯೆಯಾಗಿ ಪರಿಣಮಿಸಿದೆ.
ಸುಮಾರು ಒಂದು ಗಂಟೆ ಕಳೆದರೂ ವಾಹಬ ಸಂಚಾರ ಸುಗಮಗೊಳಿಸಲು ಸಾಧ್ಯವಾಗಿಲ್ಲ
