Home ರಾಜಕೀಯ ಸಮಾಚಾರ ನೆರೆ ಸಂತ್ರಸ್ತರಿಗೆ ನೆರವಿಗೆ ಬನ್ನಿ: ಸರಕಾರಕ್ಕೆ ಪ್ರತಾಪ ಸಿಂಹ ನಾಯಕ್ ಒತ್ತಾಯ

ನೆರೆ ಸಂತ್ರಸ್ತರಿಗೆ ನೆರವಿಗೆ ಬನ್ನಿ: ಸರಕಾರಕ್ಕೆ ಪ್ರತಾಪ ಸಿಂಹ ನಾಯಕ್ ಒತ್ತಾಯ

0

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ ಸಂಭವಿಸಿದ್ದು ಸಂಕಷ್ಟಕಿಡಾಗಿರುವ ಜನತೆಗೆ ನೆರವಾಗಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಜಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ಪತ್ರಬರೆದು ಕೇಳಿಕೊಂಡಿದ್ದಾರೆ.
ಮಳೆಯಿಂದಾಗಿ ಸಾವಿರಾರು ಜನರು ಸಮಸ್ಯೆ ಎದುರಿಸುತ್ತಿದ್ದು ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಸರಕಾರ ತ್ವರಿತಗತಿಯಲ್ಲಿ ಹಾಗೂ ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ. ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ನೀಡುವ ಕಾರ್ಯವನ್ನೂ ಮಾಡಬೇಕಾಗಿದೆ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ, ಕಂದಾಯ ಸಚಿವರಾದ ಕೃಷ್ಣೇಬೈರೇಗೌಡ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version