ಚಾರ್ಮಾಡಿ; ತಾಲೂಕಿನಲ್ಲಿ ಮಳೆಯ ಹಾನಿ ಮುಂದುವರಿದಿದ್ದು ಭೀಕರ ಮಳೆಗೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದಲ್ಲಿ ಮನೆಯೊಂದು ಭಾಗಶ ಕುಸಿದು ಬಿದ್ದಿದೆ. ಇಲ್ಲಿನ ನಿವಾಸಿ ಇಸ್ಮಾಯಿಲ್ ಅವರ ಮನೆಯ ಗೋಡೆ ಶುಕ್ರವಾರ ಮಧ್ಯಾಹ್ನದ ವೇಳೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು. ಕಂದಾಯ. ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಬೇಟಿ ನೀಡಿದ್ದಾರೆ. ವಿಕಾಯ ಗಾಂಧಿ ನಗರ ತಂಡದ ಸದಸ್ಯರು ಕೂಡಲೇ ಮನೆಯೊಳಗೆ ಬಿದ್ದಿದ್ದ ಕಲ್ಲು ಮಣ್ಣುಗಳನ್ನು ತೆರವು ಗೊಳಿಸಿದ್ದಾರೆ.