Home ರಾಜಕೀಯ ಸಮಾಚಾರ ಮಳೆಹಾನಿ ಪ್ರದೇಶಗಳಿಗೆ ರಕ್ಷಿತ್ ಶಿವರಾಂ ಭೇಟಿ

ಮಳೆಹಾನಿ ಪ್ರದೇಶಗಳಿಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ; ತಾಲೂಕಿನಲ್ಲಿ ತೀವ್ರ ಮಳೆಯಿಂದಾಗಿ ಹಲವೆಡೆ ಪ್ರತಿ ನಿತ್ಯ ಹಾನಿ ಸಂಭವಿಸುತ್ತಿದ್ದು ಮಳೆಹಾನಿಯಿಂದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬಿದರು. ನೆರಿಯ , ಉಜಿರೆ, ಗಾಳಿ ಮಳೆಯಿಂದಾಗಿ ಹಾನಿಯಾದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ರಕ್ಷಿತ್ ಶಿವರಾಂ ಸಂತ್ರಸ್ತರೊಂದಿಗೆ ಇದ್ದು ಧೈರ್ಯ ತುಂಬಿದರು.


ಬಳೆಂಜದಲ್ಲಿ ಮನೆ ಕುಸಿತವಾಗು ಭೀತಿ ಎದುರಿಸುತ್ತಿರುವ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಪಟ್ಟಣಪಂಚಾಯತು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾಮಿಯಾಗಿರುವ ಪ್ರದೇಶಗಳಿಗೂ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಮಚ್ಚಿನ ಗ್ರಾಮದಲ್ಲಿ ದೊಡ್ಡ ರೀತಿಯಲ್ಲಿ ಭೂ ಕುಸಿತವಾಗಿದ್ದು ಈ ಪ್ರದೇಶಗಳಿಗೂ ‌ಭೇಟಿ ನೀಡಿದ್ದಾರೆ. ಮಳೆಯಿಂದಾಗಿ ಸಂಕಷ್ಟದಲ್ಲಿರುವ ಇತರ ಪ್ರದೇಶಗಳಿಗೆ ಭೇಟಿ ನೀಡಿರುವ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿರುವ ಜನರಿಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಡೆಸುತ್ತಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version