Home ಸ್ಥಳೀಯ ಸಮಾಚಾರ ಸೈಂಟ್ ಸೆಬಸ್ಟಿಯನ್ ಚರ್ಚ್ ಕಳಂಜ; ಕಾರ್ಗಿಲ್ ವಿಜಯೋತ್ಸವ ಸಂಭ್ರಮ

ಸೈಂಟ್ ಸೆಬಸ್ಟಿಯನ್ ಚರ್ಚ್ ಕಳಂಜ; ಕಾರ್ಗಿಲ್ ವಿಜಯೋತ್ಸವ ಸಂಭ್ರಮ

0

ಕಳಂಜ: ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ದಿನಾಂಕ 28 ಜುಲೈ 2024 ರಂದು 1999 ರಲ್ಲಿ ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ 527 ಸೈನಿಕರು ಹಾಗೂ 1300 ಗಾಯಾಳುಗಳಾದ ಸೈನಿಕರಿಗೋಸ್ಕರ ಪ್ರಾರ್ಥನೆಯು ನೆರವೇರಿತು. ತದನಂತರ 25 ನೆಯ ವಿಜಯೋತ್ಸವದ ಸಂಭ್ರಮ ಸೂಚಕವಾಗಿ ಧಾರ್ಮಿಕ ಕೇಂದ್ರದಿಂದ ಭಾರತ ದೇಶದ ಸೈನಿಕ ಸೇವೆಯಿಂದ ನಿವೃತ್ತರಾದ ಥೋಮಸ್ ಪುತಿಯುಕುಲಂಗರ, ಮ್ಯಾಥ್ಯೂ ಉರಿಯಲ್ಪಡಿಕ್ಕಲ್ , ವಿನೋಯ್ ಚೆಮ್ಮಟ್ಟಕುಯಿ ಇವರುಗಳಿಗೆ ಗೌರವ ಸನ್ಮಾನವನ್ನು ನೀಡಲಾಯಿತು . ಹಾಗೂ ಪ್ರಸ್ತುತ ಸೇವೆಯಲ್ಲಿ ನಿರತರಾಗಿರುವ ಥೋಮಸ್ ಪೀಡಿಗೆಯಿಲ್, ಜೋಮೊನ್ ಪುವತಿಂಗಲ್ ಇವರನ್ನು ಗೌರವಿಸುವ ಸಲುವಾಗಿ ಇವರ ತಂದೆಯವರಾದ ಫಿಲಿಪ್ ಪಿಡಿಗೇಲ್, ಬೇಬಿಚ್ಚನ್ ಪೂವತಿಂಗಲ್ ಇವರನ್ನು ಸನ್ಮಾನಿಸಲಾಯಿತು. ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂದನೀಯ ಫಾದರ್ ಜೋಸೆಫ್ ವಾಳೂಕಾರನ್ ಧರ್ಮ ಕೇಂದ್ರದ ಟ್ರಸ್ಟಿಗಳಾದ ಜೋಳಿ ತಟ್ಟಾಂಪರಂಬಿಲ್, ಸೆಬಾಸ್ಟಿಯನ್ ವಳರ್ಕೊಟ್, ಜೋಸೆಫ್ ಪೀಡಿಗಯಿಲ್, ಸಂತೋಷ್ ಪೂವತಿಂಗಲ್ ಸನ್ಮಾನ ಕಾರ್ಯಕ್ರಮಕ್ಕೆ ಚುಕ್ಕಾಣಿ ವಹಿಸಿದರು. ಬ್ರದರ್ ಅರುಣ್ ಅಯ್ಯನಿಕಟ್ಟ್ ಕಾರ್ಗಿಲ್ ಯುದ್ಧದ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ವಿನೋಯ್ ಚೆಮ್ಮಟ್ಟಕುಯಿ ಅವರು ತಮ್ಮ ರಜೆ ದಿನಗಳಾಗಿ ಮನೆಗೆ ಬಂದ ಎರಡನೆಯ ದಿನ ಕಾರ್ಗಿಲ್ ಯುದ್ಧ ಆರಂಭ ಗೊಂಡಿತು. ಅಂದೆ ಅವರನ್ನು ರಜೆ ಮುಗಿಸಿ ಕಾರ್ಗಿಲ್ ಯುದ್ಧದ ಬ್ಯಾಕ್ ಸಪ್ಪೋರ್ಟ್ ಆಗಿ ಹುದ್ದೆಯನ್ನು ನೀಡಲಾಯಿತು ಎಂದು ಅವರ ಅನುಭವವನ್ನು ವಿವರಿಸಿದರು.
ಧರ್ಮ ಕೇಂದ್ರದ ನಾಲ್ಕು ತಲೆಮಾರುಗಳ ತಂದೆ ತಾಯಿಯವರಾಗಿರುವ ಗ್ರೇಟ್ ಗ್ರಾಂಡ್ ಪ್ಯಾರೆಂಟ್ಸ್ ವಲಿಯಪರಂಬಿಲ್ ಥೋಮಸ್ ತ್ರೇಸಿಯಮ್ಮ ಮತ್ತು ಚಮ್ಮಟ್ಟಕುಯಿ ವರ್ಗೀಸ್ ಕ್ಲಾರ ಅವರನ್ನು ಗ್ರಾಂಡ್ ಪ್ಯಾರೆಂಟ್ಸ್ ದಿನದಂದು ಹೋಗುಚ್ಚ ನೀಡಿ ಅಭಿನಂದಿಸಲಾಯಿತು
ಸಂತ ಅಲ್ಫೋನ್ಸಾರವರ ಸ್ಮರಣೆಯ ದಿನವಾದ ಅಂದು ಅಲ್ಫೋನ್ಸಾ ಹೆಸರನ್ನು ಹೊಂದಿರುವ ನಾಮದಾರಿಗಳಿಗೆ ಧರ್ಮ ಕೇಂದ್ರದ ವತಿಯಿಂದ ಹೋಗುಚ್ಚ ನೀಡಿ ಶುಭಾಶಯಗಳನ್ನು ಕೋರಲಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version