ಬೆಳ್ತಂಗಡಿ; ಕಣಿಯೂರಿನಲ್ಲಿ ಬಿಜೆಪಿ ಮುಖಂಡ ಗ್ರಾಮಪಂಚಾಯತು ಸದಸ್ಯ ಪ್ರವೀಣ್ ಗೌಡ ಅವರ ಮೇಲೆ ನಡೆದ ಹಲ್ಲೆ ಹಾಗೂ ದರೋಡೆಯನ್ನು ಖಂಡಿಸಿ ಬಿಜೆಪಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ಜು30 ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.
ಆರೋಪಿಗಳ ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಮುಖಂಡರು ಗಳು ಭಾಗವಹಿಸಲಿದ್ದಾರೆ.