ಬೆಳ್ತಂಗಡಿ; ಫೇಸ್ ಬುಕ್ ನಲ್ಲಿ ಟ್ರೇಡಿಂಗ್ ಬಗ್ಗೆ ಬಂದ ಜಾಹೀರಾತನ್ನು ನೋಡಿ ಅದರಲ್ಲಿ ಬಂದ ಸೂಚನೆಯಂತೆ ಹಣ ತೊಡಗಿಸಿದ ಪುತ್ತೂರಿನ ವ್ಯಕ್ತಿಯೋರ್ವ 22 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಸಂಭವಿಸಿದ್ದು ಈ ಬಗ್ಗೆ ಮಂಗಳೂರಿನ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪುತ್ತೂರು ನಿವಾಸಿ ಜಾನ್ ಪ್ರವೀಣ್ ಎಂಬವರೇ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಇವರು ಫೇಸ್ ಬುಕ್ ನಲ್ಲಿ ಬಂದ ಟ್ರೇಡಿಂಗ್ ಬಗೆಗಿನ ಜಾಹೀರಾತನ್ನು ನೋಡಿ ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರಿದರು ಬಳಿಕ ಅವರ ಸೂಚನೆಯಂತೆACVVL online APP ಅನ್ನು ಇನ್ಟಾಲ್ ಮಾಡಿದ್ದಾರೆ ಬಳಿಕ ಇದೇ ಆಪ್ ನಲ್ಲಿ ಹಣ ಇನ್ವೆಸ್ಟ್ ಮಾಡಲು ಹೇಳಿದ್ದು ಅದರಂತೆ ಅವರು ತಮ್ಮ ಹಾಗೂ ಪತ್ನಿಯ ಖಾತೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಂದ ರೂ 22,35,00 ಹಣವನ್ನು ವರ್ಗಾವಣೆ ಮಾಡಿದ್ದಾರೆ ಆದರೆ ಬಳಿಕ ಇವರು ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರತಿನಿತ್ಯ ಇಂತಹ ವಂಚನೆಯ ಪ್ರಕರಣಗಳು ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುದೆ ಮತ್ತೆ ಇದೇ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಅಪರಿಚಿತರೊಂದಿಗೆ ವ್ಯವಹಾರ ನಡೆಸುವ ಮೊದಲು ಎಚ್ಚರಿಕೆ ವಹಿಸ ಬೇಕಾದ ಅಗತ್ಯವಿದೆ.