ಬೆಳ್ತಂಗಡಿ; ತಾಲೂಕಿನಲ್ಲಿ ಮಳೆನಿರಂತರವಾಗಿ ಮುಂದುವರಿದಿದ್ದು ಲಾಯಿಲದಲ್ಲಿ ಮನೆಯೊಂದರ ಹಿಂಬದಿಯ ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.
ಲಾಯಿಲ ಪುಳಿತ್ತಡಿ ನಿವಾಸಿ ಸಂಜೀವ ಎಂಬವರ ಮನೆಯ ಹಿಂಬದಿಯ ಗೋಡೆ ಕುಸಿದ್ದಿದ್ದು ಮನೆ ಕುಸಿಯುವ ಅಪಾಯ ಎದುರಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.