ಬೆಳ್ತಂಗಡಿ; ಬಂದಾರು ಗ್ರಾಮದ ಮೈರೋಳ್ತಡ್ಕ – ಪೆರ್ಲ ಬೈಪಾಡಿ ರಸ್ತೆಯ ಬೋಲೋಡಿ ಎಂಬಲ್ಲಿ ಸೇತುವೆಯ ಸಮೀಪವೇ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದ್ದು ವಾಹನಸಂಚಾರ ಸ್ಥಗಿತಗೊಂಡಿದೆ.
ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿ ಭೂ ಕುಸಿತವಾಗಿದೆ. ಕಳೆದ ತಿಂಗಳಲ್ಲಿಯೂ ಇಲ್ಲಿ ಭೂಕುಸಿತವಾಗಿತ್ತು.
ರಸ್ತೆಯಲ್ಲಿ ಭಾರೀ ಪ್ರಮಾಣದಮಣ್ಣು ಬುದ್ದಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.
ಸ್ಥಳಕ್ಕೆ ಬಂದಾರು ಗ್ರಾಮಪಂಚಾಯತು ಅಧ್ಯಕ್ಷರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನರ ನಡೆಸಿದ್ದು ಮಣ್ಣನ್ನು ತೆರವು ಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿ ಇನ್ನಷ್ಟು ಭೂ ಕುಸಿತವಾಗುವ ಅಪಾಯವಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.