Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಮುಂಡಾಜೆ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಮುಂಡಾಜೆ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ

0

ಬೆಳ್ತಂಗಡಿ; ಮುಂಡಜೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಕಿರು ಸೇತುವೆಗಳು ದುರ್ಬಲವಾಗಿರುವ ಹಿನ್ನಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ನೀಡಿದ್ದಾರೆ.
ಪೈಚಾರು- ದಿಡುಪೆ ರಾಜ್ಯ ಹೆದ್ದಾರಿ 276ರಲ್ಲಿ ಮುಂಡಾಜೆಯಿಂದ ಧರ್ಮಸ್ಥಳ ದವರೆಗೆ ಇರುವ ರಸ್ತೆಯಲ್ಲಿ ಮೂರು ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ದುರ್ಬಲಗೊಂಡಿದೆ. ಈ ಹಿನ್ನಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಈ ಹೆದ್ದಾರಿಯ ಬದಲು ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಘನ ವಾಹನಗಳು ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಈ ರಸ್ತೆಯು ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ಹತ್ತಿರದ ಸಂಪರ್ಕ ರಸ್ತೆಯಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version