ಬೆಳ್ತಂಗಡಿ: ಪಣೆಜಾಲು ನಿವಾಸಿಯಾಗಿರುವ ಸತೀಶ್ ಕುಲಾಲ್(33 ವರ್ಷ) ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜುಲೈ 2ರಂದು ಸಂಜೆ ನಡೆದಿದೆ.ಮೃತರ ಹೆಂಡತಿ ಶಿಶು ಮಂದಿರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೆಲಸದಿಂದ ಮನೆಗೆ ಹಿಂತಿರುಗಿ ಬಂದು ನೋಡಿದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರದಲ್ಲಿ ಬರೆದಿಟ್ಟು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪಿಕಪ್ ವಾಹನದಲ್ಲಿ ವೃತ್ತಿಯನ್ನು ಮಾಡುತ್ತಿದ್ದ ಇವರು ಇಂದು ಜು.02 ರಂದು ಹೊಸ ವಾಹನವನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ ಮಂಜುಳಾ, ಒಂದು ಮಗು, ತಂದೆ- ತಾಯಿ, ಸಹೋದರರನ್ನು ಆಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.