ಬೆಳ್ತಂಗಡಿ; ತರಗತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿಯೇ ಹಂಚುಗಳು ಉರುಳಿ ಬಿದ್ದ ಘಟನೆ ತೆಕ್ಕಾರು ಗ್ರಾಮದ ಸರಳಿಕಟ್ಟೆ ಸರಕಾರಿ ಶಾಲೆಯಲ್ಲಿ ನಡೆದಿದ್ದು ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮದ್ಯಾಹ್ನದ ವೇಳೆ ತರಗತಿಗಳು ನಡೆಯುತ್ತಿದ್ದಾಗಲೇ ಭಾರೀ ಗಾಳಿ ಬೀಸಿದ್ದು ಈ ವೇಳೆ ಶಿಧಿಲಾವಸ್ತೆಯಲ್ಲಿರುವ ಕಟ್ಟಡದ ಮೇಲ್ಛಾವಣಿಯ ಹಂಚುಗಳು ಉರುಳಿ ಬಿದ್ದಿದೆ.
ಸರಳಿಕಟ್ಟೆ ಶಾಲೆಯಲ್ಲಿ ಸುಮಾರು 230ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಶಾಲೆಯ ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಸುಮಾರು 50 ವರ್ಷಕ್ಕೂ ಹಳೆಯ ಕಟ್ಟಡ ಇದಾಗಿದೆ. ತಾತ್ಕಾಲಿಕವಾಗಿ ನೀರು ಸೋರದಂತೆ ವ್ಯವಸ್ಥೆ ಮಾಡಿದ್ದರೂ ಇದೀಗ ಕಟ್ಟಡದ ಹಂಚುಗಳು ಪುಡಿಯಾಗಿ ಕೊಠಡಿಯೊಳಗೆ ಬಿದ್ದಿದ್ದು ಶಿಕ್ಷಕರಲ್ಲಿ ಹಾಗೂ ಪೋಷಕರಲ್ಲಿ ಭಯ ಮೂಡಿಸಿದೆ.
ಸರಳಿಕಟ್ಟೆ ಶಾಲೆಯಲ್ಲಿ 230ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕಟ್ಟಡದ ದುರಸತಿಗೆ ಕನಿಷ್ಟ ಅನುದಾನವೂ ಲಭಿಸುತ್ತಿಲ್ಲ. ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಕೂಡಲೇ ಇಲ್ಲಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡವನ್ನು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು
ಅಬ್ದುಲ್ ರಜಾಕ್
ಮಾಜಿ ಅಧ್ಯಕ್ಷರು ತೆಕ್ಕಾರು ಗ್ರಾಮಪಂಚಾಯತು