ಬೆಳ್ತಂಗಡಿ; ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವ ಜೈಸನ್ ಪಟ್ಟೇರಿ ಅವರಿಗೆ ಬೆಳ್ತಂಗಡಿಯ ಸಿರಿಯನ್ ಕಥೋಲಿಕ್ ವಿವಿದೋದ್ದೇಶ ಸಹಜಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬೆಳ್ತಂಗಡಿ ಸಿರಿಯನ್ ಕಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ರಾಗಿರುವ ಜೈಸನ್ ಅವರು ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖತರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅಲ್ಲದೆ ಇದೀಗ ಅವರು ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಈ ಹಿನ್ನಲೆಯಲ್ಲಿ ಸಂಘದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಿಲ್ ಎ.ಜೆ, ಉಪಾಧ್ಯಕ್ಷರಾದ ಜಾರ್ಜ್ ಕಾಂಜಾಲ್, ನಿರ್ದೇಶಕರುಗಳಾದ ಸೆಬಾಸ್ಟಿಯನ್ ವೈಪನಾ, ಅಂದಾನಿ ಕೆ.ಡಿ, ಬಾಬು ಥೋಮಸ್, ಬಿಜು ಪಿ.ಪಿ, ಸೆಬಾಸ್ಟಿಯನ್ ಬಂಗಾಡಿ, ಬಿಜು.ಎಂಜೆ, ಸೋಫಿ ಜೋಸೆಫ್, ಫಿಲೋಮಿನಾ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮನೋಜ್ ಪಿ.ಎ, ಹಾಗೂ ಸಿಬ್ಬಂದಿವರ್ಗದವರು ಇದ್ದರು.