Home ರಾಜಕೀಯ ಸಮಾಚಾರ ಸಹಕಾರ ಭಾರತಿಯ ಬೆಳ್ತಂಗಡಿ ತಾಲೂಕು ಸಮಿತಿ ಸಭೆ

ಸಹಕಾರ ಭಾರತಿಯ ಬೆಳ್ತಂಗಡಿ ತಾಲೂಕು ಸಮಿತಿ ಸಭೆ

0

ಬೆಳ್ತಂಗಡಿ; ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ಸಮಿತಿಯ ಸಭೆ ಸೋಮವಾರ ಬೆಳ್ತಂಗಡಿ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.
ಸಹಕಾರ ಭಾರತಿ‌ ಜಿಲ್ಕಾಧ್ಯಕ್ಷ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ದಿನಗಳಲ್ಲಿ ಸಹಕಾರ ಭಾರತಿ ಇದರ ಕಾರ್ಯಚಡುವಟಿಕೆಗಳ ಮಾಹಿತಿಯನ್ನು ನೀಡಿದರು. ಬೆಳ್ತಂಗಡಿ ತಾಲೂಕಿನಲ್ಲಿ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 18 ಸಂಘಗಳಲ್ಲಿ ಸಹಕಾರ ಭಾರತಿ ಅಡಳಿತ ನಡೆಸುತ್ತಿದ್ದು, ಉತ್ತಮ ಕಾರ್ಯಯೋಜನೆಯನ್ನು ಹಮ್ನಿಕೊಳ್ಳುವಂತೆ ಸೂಚಿಸಿದರು.
ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದಶಕ ಕುಶಾಲಪ್ಪ ಗೌಡ ಪೂವಾಜೆ, ಕೆಎಂಎಫ್ ನಿರ್ದಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಇದ್ದರು.


ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಕುಶಾಲಪ್ಪ ಗೌಡ ಪೂವಾಜೆ ಮತ್ತು ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗನ್ನಾಥ ಶೆಟ್ಟಿ ಮೈರ ಅವರನ್ನು ಅಭಿನಂದಿಸಲಾಯಿತು.
ಸಹಕಾರ ಭಾರತಿ‌ ಬೆಳ್ತಂಗಡಿ ಅಧ್ಯಕ್ಷ ವೆಂಕಪ್ಪಯ್ಯ ಸ್ವಾಗತಿಸಿದರು. ನಿಕಟಪೂರ್ವಾಧ್ಯಕ್ಷ ರಾಜೇಶ್ ಪೆಂರ್ಬುಡ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version