Home ಸ್ಥಳೀಯ ಸಮಾಚಾರ ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

0

ಬೆಳ್ತಂಗಡಿ; ವಾಹನಗಳಲ್ಲಿ ನೋಡುಗರ ಕಣ್ಣಿಗೆ ಬೆಳಕು ಕುಕ್ಕುವ ರೀತಿಯಲ್ಲಿ ಉಪಯೋಗಿಸುವ ಎಲ್.ಇ‌.ಡಿ ಬಲ್ಬುಗಳನ್ನು ಬಳಸಬಾರದು ಎಂಬ ನಿಯಮವಿದ್ದು ಶುಕ್ರವಾರ ಬೆಳ್ತಂಗಡಿ, ಉಜಿರೆ, ಹಳೆಪೇಟೆ ಮೊದಲಾದೆಡೆ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಕಾರ್ಯಾಚರಣೆ ನಡೆಸಸಿ ಕಾನೂನು ಬಾಹಿರವಾಗಿ ಎಲ್.ಇ.ಡಿ ಬಲ್ಬ್ ಗಳನ್ನು ಉಪಯೋಗಿಸುವವರಿಗೆ ಎಚ್ಚರಿಕೆ ನೀಡಲಾಯಿತು.

ಸ್ವತಃ ಫೀಲ್ಡಿಗಿಳಿದ ಸಂಚಾರಿ ಠಾಣೆ ಎಸ್.ಐ ಅರ್ಜುನ್ ಅವರು ರಿಕ್ಷಾ ಚಾಲಕರಲ್ಲಿ ಹಾಗೂ ಇತರ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದರು. ಸದ್ರಿ ಲೈಟ್ ಉಪಯೋಗಿಸುತ್ತಿದ್ದವರ ಲೈಟ್ ಗಳನ್ನು ತೆರವುಗೊಳಿಸಿದರು.

ಅದೇ ರೀತಿ ಕೆಲ ವಾಹನಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವ ಕರ್ಕಷ ಹಾರ್ನ್‌ಗಳನ್ನು ಸಂಚಾರಿ ಪೊಲೀಸರು ತೆರವುಗೊಳಿಸಬೇಕು ಎಂಬುದೂ ಸಾರ್ವಜನಿಕರ ಮನವಿಯಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version