Home ರಾಜಕೀಯ ಸಮಾಚಾರ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಸಂಸ್ಥಾಪನಾ ದಿನಾಚರಣೆ

ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಸಂಸ್ಥಾಪನಾ ದಿನಾಚರಣೆ

395
0

ಬೆಳ್ತಂಗಡಿ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ )ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ನಗರದ ಪಕ್ಷದ ಕಛೇರಿ ಮುಂಭಾಗದಲ್ಲಿ ದ್ವಜಾರೋಹಣವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ಅವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ ವಹಿಸಿದರು.
ಪಕ್ಷದ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಳಾದ ಅಕ್ಬರ್ ಬೆಳ್ತಂಗಡಿ, ಸಮಿತಿ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್, ಸಂಜಯ್ ಗ್ಲೋಬಲ್ ಫೌಂಡೇಷನ್ ಇದರ ಅಧ್ಯಕ್ಷರಾದ ಇಸ್ಮಾಲಿ ಐ,ಬಿ, ಕಾರ್ಯದರ್ಶಿಗಳಾದ ಫಝಲ್ ಉಜಿರೆ, ಸಾದಿಕ್ ಲಾಯಿಲಾ, ಕೋಶಾಧಿಕಾರಿ ಅಶ್ರಫ್ ಕಟ್ಟೆ, ಫೈಝಲ್, ಶಾ ಕುದ್ರಡ್ಕ ನವಾಝ್ ಕುದ್ರಡ್ಕ, ಸಲೀಂ ಮುರ, ಮೊಯಿಸಿನ್ ಲಾಯಿಲಾ, ಇಸ್ಮಾಯಿಲ್ ಉಪಸ್ಥಿತರಿದ್ದರು. ಸಮಿತಿ ಸದಸ್ಯರಾದ ನಿಝಾಮ್ ಸ್ವಾಗತಿಸಿ ವಂದಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿ, ಲಾಯಿಲ, ಮದ್ದಡ್ಕ, ಪೆರಲ್ದರ ಕಟ್ಟೆ, ಸುನ್ನತ್ ಕೆರೆ, ಪುಂಜಾಲಕಟ್ಟೆ, ಬಂಗೇರಕಟ್ಟೆ, ಉಜಿರೆ, ಕಲ್ಲೇರಿ, ಕುದ್ರಡ್ಕ, ಚಾರ್ಮಾಡಿ, ಮೂರುಗೋಳಿ ಸ್ಥಳಗಳಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here