ಕಕ್ಕಿಂಜೆ ಪೇಟೆಯಲ್ಲಿ ಸೋಮವಾರ ಸಂಜೆ ಹೆದ್ದಾರಿಯಲ್ಲಿ ಬೋಲೇರೋ ವಾಹನವನ್ನು ತಿರುಗಿಸುವ ವೇಳೆ ವಾಹನವು ಬೈಕ್ ಗೆ ಡಿಕ್ಕಿ ಹೊಡೆದು ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ನಡೆದಿದೆ. ಬೈಕ್ ಸವಾರ ಬೈಕ್ ನಿಂದ ಹಾರಿದ ಕಾರಣ ಹೆಚ್ಚಿನ ಅಪಾಯದಿಂದ ಪಾರಾಗಿದ್ದು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಜಖಂಗೊಂಡಿದೆ.ಅಂಗಡಿ ಮುಂಭಾಗ ಜನರು ಇರಲಿಲ್ಲವಾದ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.