ಬೆಳ್ತಂಗಡಿ; ಎಲ್ಲಾ ಮಸೀದಿಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಇವೆ ಎಂದು ತಾನೇ ಖುದ್ದಾಗಿ ನೋಡಿ ಬಂದಂತೆ, ಯಾವುದೇ ಸಾಕ್ಷಿಗಳಿಲ್ಲದೆ ಗಂಬೀರ ಆಪಾದನೆ ಮಾಡಿದ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜರ ಹೇಳಿಕೆ ಖಂಡನೀಯ ಹಾಗೂ ಸಂವಿಧಾನ ವಿರೋದಿ ಮತ್ತು ಮತಾಂಧ ಹೇಳಿಕೆಯಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಿಪಿಐಎಂ ಮುಖಂಡ ಬಿ.ಎಂ.ಭಟ್ ಹೇಳಿದ್ದಾರೆ.
ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪೂಂಜರು ಕರ್ನಾಟಕ ರಾಜ್ಯದಲ್ಲಿ ಕಳೆದ 4 ವರ್ಷ ಬಿಜೆಪಿ ಸರಕಾರ ಇದ್ದಾಗ ಎಲ್ಲಾ ಮಸೀದಿಗಳ ಪರಿಶೀಲನೆ ಮಾಡದೆ ಸುಮ್ಮನಿದ್ದುದು ಯಾಕೆ ಎಂದು ಪ್ರಶ್ನಿಸಿದರು? ಅವರು ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಗಳನ್ನು ಇಟ್ಟುಕೊಂಡಿದ್ದಾರೆಂದು ದೇವಸ್ಥಾನ ಮಸೀಗಳಿಗೆ ಅವುಗಳನ್ನು ತರುವುದು ಬೇಡ ಎಂದ ಅವರು ಪೂಂಜರಿಗೆ ತಳ್ವಾರು ಅಸ್ತ್ರಗಳಿಲ್ಲದೆ ರಾಜಕೀಯವೇ ಇಲ್ಲದಾಗಿದೆ ಎಂದು ಕುಟುಕಿದರು. ಇದೀಗ ಅದಿಕಾರ ಕಳೆದುಕೊಂಡು ಇಂಗು ತಿಂದ ಮಂಗನಂತೆ ಎಂಬ ಗಾದೆಯಂತೆ ನಮ್ಮ ಶಾಸಕರ ಬಾಯಲ್ಲಿ ಏನೇನೋ ಅಹಿತಕರ ಮಾತುಗಳೇ ಬರುತ್ತಿವೆ ಎಂದು ಟೀಕಿಸಿದರು. ಅವರ ಬಾಯಲ್ಲಿ ದಿನಬೆಳಗಾದರೆ ಮತಾಂಧತೆ ದೇಶ ದ್ರೋಹದ ಹೇಳಿಕೆಗಳು ನಿರಂತರವಾಗಿ ಬರುತ್ತಿವೆ. ಅವರ ಇತ್ತೀಚೆಗಿನ ನಡವಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುವಂತಾಗಿದೆ. ಅವರು ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು ಈ ಮೂಲಕ ಅವರಿಗೆ ನಾವು ಕಿವಿ ಮಾತು ಹೇಳುತ್ತೇವೆ ಎಂದರು. ಕಳೆಂಜ ಅರಣ್ಯ ಇಲಾಖೆಯ ಜೊತೆ ಗುದ್ದಾಟ, ಅಕ್ರಮ ಗಣಿಗಾರಿಕೆಯಲ್ಲಿ ಅವರ ಬಲಗೈ ವ್ಯಕ್ತಿಗಳು ಸಿಕ್ಕಿ ಬಿದ್ದಾಗ ಪೋಲೀಸ್ ಇಲಾಖೆಯಲ್ಲಿ ಅವರ ರಂಪಾಟ ಚುನಾವಣೆ ಬಂದಾಗ ಅವರ ತಳ್ವಾರು ರಾಜಕೀಯ ಹಾಗೂ ಇದೀಗ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಗಣನೀಯ ಮತಗಳು ಕಡಿಮೆ ಆಗಿರುವುದನ್ನು ಸಹಿಸಲಾರದೆ ಈ ಮತಾಂಧ ಹೇಳಿಕೆಗಳು ಎಲ್ಲವೂ ತಾಲೂಕಿಗೆ ನಾಚಿಕೆಯ ವಿಚಾರಗಳಾಗಿವೆ. ಮೂರು ಮೂರು ಕ್ರಿಮಿನಲ್ ಕೇಸುಗಳು ನಮ್ಮ ತಾಲೂಕಿನ ಶಾಸಕರ ಮೇಲಿದೆ ಎನ್ನುವುದು ಬೆಳ್ತಂಗಡಿಯ ಜನತೆಗೆ ಅವರು ಮಾಡುವ ಅವಮಾನವಾಗಿದೆ. ಅವರು ಶಾಸಕರಾಗಿ ಈ ರೀತಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹೇಳಿಕೆ ನಡವಳಿಕೆಯನ್ನು ತಕ್ಷಣ ಕೈಬಿಡಬೇಕು ಹಾಗೂ ಸರಕಾರ ಇಂತಹ ಶಾಸಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರೈತ ಕಾರ್ಮಿಕ ವರ್ಗ ಅವರ ವಿರುದ್ದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಪತ್ರಿಕಾಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.