Home ಸ್ಥಳೀಯ ಸಮಾಚಾರ ಲೋಕಾಯುಕ್ತ ಅಧಿಕಾರಿಗಳಿಂದ ವಿದ್ಯಾರ್ಥಿ ನಿಲಯ ಪರಿಶೀಲನೆ: ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು

ಲೋಕಾಯುಕ್ತ ಅಧಿಕಾರಿಗಳಿಂದ ವಿದ್ಯಾರ್ಥಿ ನಿಲಯ ಪರಿಶೀಲನೆ: ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು

314
0

ಬೆಳ್ತಂಗಡಿ: ನಗರದ ಪದವಿಪೂರ್ವ ಕಾಲೇಜು ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಲೋಕಾಯುಕ್ತ ಅದಿಕಾರಿಗಳು ಬುಧವಾರ ಬೇಟಿ ನೀಡಿ ವಸತಿ ನಿಲಯದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿನ ಕುಡಿಯುವ ನೀರು, ಅಡುಗೆಕೋಣೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗಳ ಪರಿಶಿಲನೆ ಮಾಡಿದ ಅದಿಕಾರಿಗಳು ವಸತಿನಿಲಯದ ಮೆಲ್ವಿಚಾರಕರಿಂದ ಮಾಹಿತಿ ಪಡೆದರು. ಅಡುಗೆ ಕೋಣೆ ಪರಿಶೀಲಿಸಿದ ಅದಿಕಾರಿಗಳು ಅಹಾರ ದಾಸ್ತಾನು ಡಬ್ವಗಳ ಪರಿಶೀಲನೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಮಾಹಿತಿ ಸಂಗ್ರಹಿಸಿದ ಅದಿಕಾರಿಗಳು ಅಹಾರ ವ್ಯವಸ್ಥೆ, ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ವಸತಿ ನಿಲಯದಲ್ಲಿ ಸಮಸ್ಯೆ ಬಂದರೆ ಲೋಕಾಯುಕ್ತಕ್ಕೆ ದೂರು ನೀಡಲು ತಿಳಿಸಿದರು.

ವಸತಿನಿಲಯದ ವಿದ್ಯಾರ್ಥಿಗಳು 100% ಪಲಿತಾಂಶ ಪಡೆದ ಬಗ್ಗೆ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾದಿಕಾರಿ ಜೋಸೆಪ್ ಮಾಹಿತಿ ನೀಡಿದರು.ಇದಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಸತಿ ನಿಲಯದ ಅಧಿಕಾರಿ ಜೋಸೆಪ್ ಮಾಹಿತಿ ನೀಡಿ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಸ್ಥಳದ ಅಭಾವವಿದೆ. ಮಕ್ಕಳ ಸಂಖ್ಯೆ ಕಡಿಮೆ ಮಾಡಿದರೆ ಇರುವ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಇಲ್ಲಿ ದಾಖಲಾತಿ 125 ಕ್ಕೆ ಅವಕಾಶ ಇದ್ದರು ಈಗ 110 ಮಕ್ಕಳನ್ನು ದಾಖಲಾತಿ ಮಾಡಲಾಗಿದೆ. ಎಲ್ಲಾ ವಸತಿ ನಿಲಯದ ಸುತ್ತ ಸಿ ಸಿ ಕ್ಯಾಮಾರಾ ಅಳವಡಿಸಲಾಗಿದೆ.ರಾತ್ರಿ ಹೊತ್ತು ಸಿಬ್ಬಂದಿಗಳು ವಾಸ್ತವ್ಯ ಇದ್ದು ಮಕ್ಕಳ ಸುರಕ್ಷತೆಗೆ ಗಮನ ಹರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ನಿವೇಶನ ಸಮಸ್ಯೆ ಸರಕಾರ ವಸತಿ ನಿಲಯ ಮಂಜೂರು ಗೊಳಿಸಿದರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ‌ ಕಡೆ ಸರಕಾರಿ ನಿವೇಶನ ಸಿಗುತ್ತಿಲ್ಲ. ದೂರದ ಹಳ್ಳಿ ಪ್ರದೇಶದಲ್ಲಿ ವಸತಿ ನಿಲಯ ಮಾಡಿದರೆ ಮಕ್ಕಳಿಗೆ ಹೋಗುಬರುವ ಇನ್ನೊಂದು ಸಮಸ್ಯೆಯಾಗುತ್ತದೆ ಈ ಬಗ್ಗೆ ಕಂದಾಯ ಅಧಿಕಾರಿಗಳು ಗಮನ ಹರಿಸಿದರೆ ಒಳ್ಳೆಯದು ಎಂದು ಲೋಕಾಯುಕ್ತ ಅದಿಕಾರಿ ಬಳಿ ವಸತಿ ನಿಲಯದ ಅದಿಕಾರಿಗಳು ಪ್ರಸ್ತಾಪಿಸಿದರು. ಈ ಬಗ್ಗೆ ಮಾಹಿತಿ ಕೊಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು. ಲೋಕಾಯುಕ್ತ ಎಸ್ ಪಿ ನಟರಾಜ್ ಮಾರ್ಗದರ್ಶನದಲ್ಲಿ ಇನ್ಪೆಕ್ಟರುಗಳಾದ ಚಂದ್ರಶೇಖರ ಸಿ ಎಲ್, ಚಂದ್ರಶೇಖರ ಕೆ ಎನ್, ಅಮಾನಂದ್, ಸಿಬ್ಬಂದಿಗಳಾದ ವಿನಾಯಕ್,ಮಹೇಶ್,ಪಾಪಣ್ಣ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here