Home ರಾಜಕೀಯ ಸಮಾಚಾರ ದೇಶದಲ್ಲಿ ಮತ್ತಮ್ಮೆ ಬಿಜೆಪಿ ಸರಕಾರ ಪ್ರತಾಪಸಿಂಹ ನಾಯಕ್

ದೇಶದಲ್ಲಿ ಮತ್ತಮ್ಮೆ ಬಿಜೆಪಿ ಸರಕಾರ ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: 18 ನೇ ಲೋಕಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್.ಡಿ.ಎ. ಗೆ ಪೂರ್ಣ ಬಹುಮತ ಸಿಕ್ಕಿದ್ದು ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ಬಹುನಿರೀಕ್ಷಿತ ಅಪಪ್ರಚಾರ, ಷಡ್ಯಂತ್ರಗಳ ನಡುವೆಯೂ ಎನ್.ಡಿ.ಎ. ಲೋಕಸಭೆಯ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. ಬಿಜೆಪಿಯೊಂದಿಗಿನ ಅದರ ಮಿತ್ರಪಕ್ಷಗಳು ಸುಭದ್ರ ಸರಕಾರದ ರಚನೆಗೆ ಸಹಯೋಗ ನೀಡಲಿದ್ದು ಮುಂದಿನ ಐದುವರ್ಷಗಳವರೆಗೆ ಮತ್ತೆ ಕಾಂಗ್ರೇಸೇತರ ಸರಕಾರ ದೇಶದಲ್ಲಿ ಅಧಿಕಾರದಲ್ಲಿ ಇರಲಿದೆ.
ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಗಳೂರು ಲೋಕಸಭಾಕ್ಷೇತ್ರದಲ್ಲಿ ಕ್ಯಾ.ಬೃಜೇಶ್ ಚೌಟ ಅವರು 1.48 ಲಕ್ಷ ಮತಗಳ ಅಂತರದಿಂದ ವಿಜಯಗಳಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version