Home ಸ್ಥಳೀಯ ಸಮಾಚಾರ ನಿವೃತ್ತ ಯೋಧ ಅನೀಶ್ ಡಿ.ಎಲ್. ಅವರಿಗೆ ಭವ್ಯ ಸ್ವಾಗತ

ನಿವೃತ್ತ ಯೋಧ ಅನೀಶ್ ಡಿ.ಎಲ್. ಅವರಿಗೆ ಭವ್ಯ ಸ್ವಾಗತ

0

ಬೆಳ್ತಂಗಡಿ; ಕಳೆದ 20ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಆಗಮಿಸಿದ ಧರ್ಮಸ್ಥಳದ ಅನೀಶ್ ಡಿ.ಎಲ್ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಅವರನ್ನು ಕರೆತರಲಾಯಿತು.


ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ಬೆಳ್ತಂಗಡಿ ಇನ್ಸ್ ಪೆಕ್ಟರ್ ಸುಬ್ಭಾಪುರ ಮಠ್ ಸೇರಿದಂತೆ ಗಣ್ಯರು ಪುಷ್ಪ ಗುಚ್ಚನೀಡಿ ಅವರನ್ನು ಸ್ವಾಗತಿಸಿದರು. ಕೆ.ಎಸ್. ಎಂ.ಸಿ ಎ ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ಬೆಳ್ತಂಗಡಿ ಸಿರಿಯನ್ ಕಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ,

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಹಿರಿಯ ಮುಖಂಡರಾದ ರಾಜಶೇಖರ ಅಜ್ರಿ, ಭರತ್ ಬಂಗಾಡಿ, ವಿವಿಧ ಸಂಘಟನೆಗಳ ಮುಖಂಡರುಗಳಾದ ರೋಯಿ ಪುದುವೆಟ್ಟು, ಜಾರ್ಜ್ ಕಾಂಜಾಲ್, ದಾಯಾನಂದ ಬೆಳಾಲು, ರೋಬಿನ್ ಓಡಂಪಳ್ಳಿ, ರೆಜಿ ಬೆಳ್ತಂಗಡಿ, ಅಜಯ್ ಎ.ಜೆ, ಬಿ.ಕೆ ವಸಂತ್, ಸೆಬಾಸ್ಟಿಯನ್ ಬಂಗಾಡಿ, ಶೇಖರ ಲಾಯಿಲ, ಜೇಮ್ಸ್ ಕೆ.ಜೆ, ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version