Home ಅಪರಾಧ ಲೋಕ ಅಕ್ರಮ ಕಸಾಯಿಖಾನೆ ಪೊಲೀಸ್ ದಾಳಿ ಮಾಂಸ ಸೇರಿದಂತೆ ಸೊತ್ತುಗಳು ವಶಕ್ಕೆ

ಅಕ್ರಮ ಕಸಾಯಿಖಾನೆ ಪೊಲೀಸ್ ದಾಳಿ ಮಾಂಸ ಸೇರಿದಂತೆ ಸೊತ್ತುಗಳು ವಶಕ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕು ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ ಅಶ್ರಫ್ ಎಂಬಾತ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಯೆ ಹಾಗೂ ಕರಾಯ ಗ್ರಾಮದ ಸಿರಾಜ್ ಎಂಬಾತ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಯೆ ಶನಿವಾರ ತಮಗೆ ದೊರೆತ ಖಚಿತ ಮಾಹಿತಿಯಂತೆ ಪುಂಜಾಲಕಟ್ಟೆ ಪೊಲೀಸ್‌ಠಾಣಾ ಉಪನಿರೀಕ್ಷಕ ಉದಯರವಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸ್ಥಳದಿಂದ ಜಾನುವಾರುಗಳ ಮಾಂಸ ಹಾಗೂ ಮಾಂಸ ಮಾಡಲು ಬಳಸಿದ ಕತ್ತಿ ಮತ್ತು ಇತರ ವಸ್ತುಗಳನ್ನು ಹಾಗೂ ಎರಡು ಜಾನುವಾರುಗಳನ್ನು ಹಾಗೂ ಅವುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ವಾಹನವನ್ನು ಹಾಗೂ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಆಶ್ರಫ್ ಮತ್ತು ಸಿರಾಜ್ ಮತ್ತು ಇನ್ನೊಬ್ಬಾತ ಓಡಿ ತಪ್ಪಿಸಿಕೊಂಡಿದ್ದಾರೆ. ಅವರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version