ಬೆಳ್ತಂಗಡಿ; ಭಾರತೀಯ ಭೂಸೇನೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳದ ಅನೀಶ್ ಡಿ.ಎಲ್ ಅವರು ಜೂನ್ 3 ರಂದು ತವರೂರಿಗೆ ಹಿಂತಿರುಗಲಿದ್ದಾರೆ.
ಜೂನ್ 3 ರಂದು ಅಪರಾಹ್ನ 2.30ಕ್ಕೆ ಅವರು ಬೆಳ್ತಂಗಡಿ ಗೆ ಆಗಮಿಸಲಿದ್ದಾರೆ. ಅವರಿಗೆ ಬೆಳ್ತಂಗಡಿಯಲ್ಲಿ ಕೆ.ಎಸ್.ಎಂ.ಸಿ ಎ ಧರ್ಮಸ್ಥಳ ವಲಯ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಸ್ವಾಗತಿಸಿ ಧರ್ಮಸ್ಥಳದ ಅವರ ಮನೆಯವರೆಗೆ ವಾಹ ಜಾಥಾದಲ್ಲಿ ಕರೆದೊಯ್ಯಲಾಗುವುದು.
ಧರ್ಮಸ್ಥಳನಿವಾಸಿ ಡಿ ಲಾಲಿ ಹಾಗೂ ಸಾರಮ್ಮ ದಂಪತಿಗಳ ಪುತ್ರನಾಗಿರುವ ಅನೀಶ್ ಡಿ.ಎಲ್. ಕಳೆದ 20ವರ್ಷಗಳ ಕಾಲ ರಾಜಾಸ್ತಾನ್, ಮಣಿಪುರ, ಉತ್ತರಾಖಂಡ, ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ ವಿವಿದೆಡೆ ಸೇವೆ ಸಲ್ಲಿಸಿದ್ದಾರೆ.