Home ಅಪರಾಧ ಲೋಕ ಉಜಿರೆ ಕ್ರೀಡಾ ನಿಲಯದ ವಿಧ್ಯಾರ್ಥಿನಿ ನಾಪತ್ತೆ

ಉಜಿರೆ ಕ್ರೀಡಾ ನಿಲಯದ ವಿಧ್ಯಾರ್ಥಿನಿ ನಾಪತ್ತೆ

493
0

ಬೆಳ್ತಂಗಡಿ; ಉಜಿರೆಯ ಎಸ್‌.ಡಿ ಎಂ ಕಾಲೇಜಿನ ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ ನಿಲಯ ಪಾಲಕಿ ನೀಡಿರುವ ದೂರಿನಂತೆ ಬೇಲೂರಿನ ದಿವ್ಯಾ ಎಸ್. ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿದ್ದು‌ ಮೇ 29ರಂದು ಬೆಳಿಗ್ಗೆ ಕ್ರೀಡಾಂಗಣಕ್ಕೆ ಹೋಗಿ ಬರುವುದಾಗಿ ಹೇಳಿ ನಿಲಯ ಪಾಲಕರಲ್ಲಿ ಪಡೆದುಕೊಂಡು ಹೋದವಳು ಹಸ್ಟೆಲ್ ಗೂ ಹಿಂತಿರುಗದೆ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ.
ಇದೀಗ ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ‌ ದಾಖಲಿಸಿಲಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here