ಬೆಳ್ತಂಗಡಿ; ಕೊಕ್ಕಡ ಸೌತಡ್ಕದ ಬಳಿಯ ಗೇರು ತೋಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಸ್ಥಳೀಯರು ಇದನ್ನು ಗಮನಿಸಿದ್ದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಎರಡುಮೂರು ದಿನಗಳ ಹಿಂದೆ ಈ ವ್ಯಕ್ತಿಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಅನುಮಾನಿಸಲಾಗಿದ್ದು ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿದ್ದಮೃತದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳಾದ ಸಚಿನ್ ಭಿಡೆ ಮುಂಡಾಜೆ,ರಮೇಶ್ ಬೈರಾಕಟ್ಟಾ, ಕಿರಣ್ ಶಿಶಿಲ, ಅವಿನಾಶ್ ಭೀಡೆ, ಪ್ರವೀಣ್ ಪತ್ತಿಮಾರ್ . ಪೊಲೀಸರಿಗೆ ಸಹಕರಿಸಿದರು.