Home ಸ್ಥಳೀಯ ಸಮಾಚಾರ ಕಡಿರುದ್ಯಾವರದಲ್ಲಿ ಸಲಗನ ಹಾವಳಿ ಕೃಷಿ ನಾಶ

ಕಡಿರುದ್ಯಾವರದಲ್ಲಿ ಸಲಗನ ಹಾವಳಿ ಕೃಷಿ ನಾಶ

0


ಬೆಳ್ತಂಗಡಿ:ಕಡಿರುದ್ಯಾವರ ಗ್ರಾಮದ ಹಲವು ಕಡೆ ಒಂಟಿ ಸಲಗ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದೆ.
ಭಾನುವಾರ ತಡರಾತ್ರಿ ಇಲ್ಲಿನ ಬಸವದಡ್ಡು ಶಂಕರ್ ಭಟ್,ನಡ್ತಂಡ ಮಹೇಶ್ ಭಟ್, ನೀಲಯ್ಯ ಗೌಡ ,ಪ್ರವೀಣ್ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿದ ಸಲಗ ಅಡಕೆ,ಬಾಳೆ ಗಿಡಗಳನ್ನು ಮುರಿದು ಹಾಕಿದೆ.
ರಾಮಚಂದ್ರ ಗೌಡ ಎಂಬವರ ಸಾಕು ನಾಯಿ ಆನೆ ಬಳಿ ಬೊಗಳುತ್ತ ಹೋಗಿದ್ದು ಈ ಸಮಯ ಆನೆ ಅವರ ಮನೆ ತನಕ ನಾಯಿಯನ್ನು ಓಡಿಸಿದ್ದು,ಅಂಗಳದಲ್ಲೇ ನಿಂತು ಘೀಳಿಟ್ಟಿದೆ.ಈ ವೇಳೆ ಮನೆಯವರು ಭೀತ ರಾದ ಘಟನೆಯೂ ನಡೆಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಡಾನೆಗಳ ಅಟ್ಟಹಾಸವೂ ಆರಂಭಗೊಂಡಿದ್ದು ಜನರಲ್ಲಿ ಭಯ ಮೂಡಲು ಕಾರಣವಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version