ಬೆಳ್ತಂಗಡಿ: ಶಿಬಾಜೆಯಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಲು ಯತ್ನಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ಶಿಬಾಜೆ ಗ್ರಾಮದ ಪೆರ್ಲ-ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಶಿರಾಡಿ-ಶಿಶಿಲ ಮೀಸಲು ಅರಣ್ಯದಲ್ಲಿ ಮೇ 23 ಬೆಳಗ್ಗಿನ ಜಾವ ಎರಡು ಗಂಟೆ ವೇಳೆಗೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆಯ ತಂಡ ಶಿಬಾಜೆಯ ಕುರುಂಬು ನಿವಾಸಿ ಹರೀಶ್(44), ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್(33), ಶಿಬಾಜೆಯ ಪತ್ತಿಮಾರ್ ನ ಪದ್ಮನಾಭ(53) ಎಂಬ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಕೋವಿ ಮತ್ತು ಒಂದು ಮಾರುತಿ ಓಮ್ಮಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ನೇತೃತ್ವದ ಸಿಬ್ಬಂದಿ ಉಪ ವಲಯ ಅರಣ್ಯಾಧಿಕಾರಿ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬಿಟ್ ಫಾರೆಸ್ಟ್ ನಿಂಗಪ್ಪ ಅವರಿ, ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.